ADVERTISEMENT

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ 4ರಿಂದ

ಶೂನ್ಯಪೀಠಾರೋಹಣದ ಬದಲು ಮುರಿಗಾ ಶಾಂತವೀರ ಸ್ವಾಮೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:20 IST
Last Updated 2 ಅಕ್ಟೋಬರ್ 2022, 5:20 IST
ಬಸವ ಕುಮಾರ ಸ್ವಾಮೀಜಿ
ಬಸವ ಕುಮಾರ ಸ್ವಾಮೀಜಿ   

ಚಿತ್ರದುರ್ಗ: ‘ಪ್ರತಿ ವರ್ಷ 9 ದಿನಗಳ ಕಾಲ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವವನ್ನು ಈ ಬಾರಿ ಮಠದಲ್ಲಿ ನಡೆದ ಬೆಳವಣಿಗೆಯಿಂದಾಗಿ ಅಕ್ಟೋಬರ್‌ 4ರಿಂದ 6ರವರೆಗೆ ಸರಳವಾಗಿ ಆಚರಿಸಲಾಗುತ್ತಿದೆ’ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವ ಕುಮಾರ ಸ್ವಾಮೀಜಿ ತಿಳಿಸಿದರು.‌

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ಸವದ ಪ್ರಮುಖ ಘಟ್ಟವಾದ ಶೂನ್ಯಪೀಠಾರೋಹಣವನ್ನು ಅ.6ರಂದು ಬೆಳಿಗ್ಗೆ ಅಲಂಕೃತ ಮರದ ಆಸನದ ಮೇಲೆ ಮುರಿಗಾ ಶಾಂತವೀರ ಸ್ವಾಮೀಜಿ ಅವರ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಲಾಗುತ್ತದೆ. ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು’ ಎಂದರು.

ಮಠದ ಪೀಠಾಧ್ಯಕ್ಷರು ಚಿನ್ನದ ಕಿರೀಟ, ಬಂಗಾರದ ಪಾದುಕೆ ಹಾಗೂ ಆಭರಣ ಧರಿಸಿ ರತ್ನಖಚಿತ ಸಿಂಹಾಸನದ ಪೀಠಾರೋಹಣ ಮಾಡುವುದು ಮಠದ ವಾಡಿಕೆಯಾಗಿತ್ತು. ಶಿವಮೂರ್ತಿ ಮುರುಘಾ ಶರಣರು ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಧರಿಸುವ ಪರಂಪರೆ ಆರಂಭಿಸಿದರು. ಮರದ ಪಾದುಕೆ ಧರಿಸಿ, ಮರದ ಆಸನದ ಮೇಲೆ ಕುಳಿತು ಶೂನ್ಯಪೀಠಾರೋಹಣ ಮಾಡುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.