ADVERTISEMENT

ಡಿಎಆರ್‌ ಮುಡಿಗೆ ಸಮಗ್ರ ಪ್ರಶಸ್ತಿ

ಪೊಲೀಸ್ ವಾರ್ಷಿಕ ಜಿಲ್ಲಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:24 IST
Last Updated 8 ಮಾರ್ಚ್ 2021, 5:24 IST
ಚಿತ್ರದುರ್ಗದಲ್ಲಿ ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಡಿಎಆರ್‌ ತಂಡ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ದಾವಣಗೆರೆ ಪೂರ್ವವಲಯ ಐಜಿಪಿ ಎಸ್‌. ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಗಾವಿ ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಡಿಎಆರ್‌ ತಂಡ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ದಾವಣಗೆರೆ ಪೂರ್ವವಲಯ ಐಜಿಪಿ ಎಸ್‌. ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಗಾವಿ ಇದ್ದರು.   

ಚಿತ್ರದುರ್ಗ: ಹಗ್ಗ–ಜಗ್ಗಾಟ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆಣಸಾಡಿದ ಚಿತ್ರದುರ್ಗ ಡಿಎಆರ್‌ ತಂಡ ಹಿರಿಯೂರು ತಂಡದ ವಿರುದ್ಧ ಜಯಗಳಿಸಿ ಪ್ರಥಮ ಬಹುಮಾನ ಪಡೆದುಕೊಂಡಿತು. ವಿವಿಧ ಕ್ರೀಡೆಗಳಿಂದ 76 ಅಂಕ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮೂರು ದಿನಗಳ ಕಾಲ ನಡೆದು ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ತಂಡ ಪ್ರಶಸ್ತಿ
ಪಡೆಯಿತು.

ಎರಡೂ ಕಡೆಯ ಪೊಲೀಸ್ ತಂಡದವರು ಸೂಚನೆಗಾಗಿ ಕಾಯುತ್ತ ನಿಂತಿದ್ದರು. ದಾವಣಗೆರೆ ಪೂರ್ವವಲಯ ಐಜಿಪಿ ಎಸ್‌. ರವಿ ಅವರು ಕ್ರೀಡೆಗೆ ಚಾಲನೆ ನೀಡುತ್ತಿದ್ದಂತೆ ಉತ್ಸುಕರಾದರು.

ADVERTISEMENT

ಯಾರು ಗೆಲ್ಲುತ್ತಾರೋ ಎಂಬ ಕುತೂಹಲ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಮನೆಮಾಡಿತ್ತು.ತಲಾ ಒಂಬತ್ತು ಮಂದಿ ಭಾಗವಹಿಸಿದ್ದ ಈ ಕ್ರೀಡೆ ಎರಡು ತಂಡಗಳಿಗೂ ಪ್ರತಿಷ್ಠೆಯ ಸ್ಪರ್ಧೆಯಾಗಿತ್ತು. ಸಂಜೆ ಪಂದ್ಯ ಆರಂಭವಾಯಿತು. ಅಂತಿಮ ಸುತ್ತಿನಲ್ಲಿಯೂ ತೀವ್ರ ಪೈಪೋಟಿ ನೀಡಿದ ಹಿರಿಯೂರು ತಂಡವನ್ನು ಚಿತ್ರದುರ್ಗ ಡಿಎಆರ್‌ ತಂಡ ಮಣಿಸಿ ಗೆಲುವಿನ ನಗೆ ಬೀರಿತು.

ಫಲಿತಾಂಶದ ವಿವರ:

100 ಮೀಟರ್ ಓಟ: ಪ್ರವೀಣ್‌ಕುಮಾರ್–1, ಎಲ್‌. ನಾರಾಯಣ್–2, ರಂಗಸ್ವಾಮಿ–3.

100 ಮೀಟರ್‌ ಓಟ (ಸಿಪಿಐ): ರುದ್ರೇಶ್‌–1, ಪ್ರಕಾಶ್‌–2, ಮೃತ್ಯುಂಜಯ–3.

200 ಮೀಟರ್‌ ಓಟ: ಸೋಮ
ಶೇಖರಪ್ಪ–1, ಮೃತ್ಯುಂಜಯ–2, ಪ್ರಕಾಶ್–3.

100 ಮೀಟರ್‌ ಓಟ (ಡಿವೈಎಸ್‌ಪಿ): ಜಿ.ಎಂ. ತಿಪ್ಪೇಸ್ವಾಮಿ–1, ಪಾಂಡುರಂಗ–2, ಕೆ.ವಿ. ಶ್ರೀಧರ್–3.

ಗುಂಡು ಎಸೆತ (ಎಸ್‌ಪಿ/ಎಎಸ್‌ಪಿ): ಜಿ. ರಾಧಿಕಾ–1, ಎಂ.ಬಿ. ನಂದಗಾವಿ–2.

ಗುಂಡು ಎಸೆತ (ಡಿವೈಎಸ್‌ಪಿ): ಶ್ರೀಧರ್–1, ತಿಪ್ಪೇಸ್ವಾಮಿ–2, ಪಾಂಡುರಂಗ–3.

7.62 ರೈಫಲ್ ಗುರಿ ಸ್ಪರ್ಧೆ: ಎಸ್‌ಪಿ ವಿಭಾಗದಲ್ಲಿ ಜಿ. ರಾಧಿಕಾ–1, ನಂದಗಾವಿ–2. ಡಿವೈಎಸ್‌ಪಿ ವಿಭಾಗದಲ್ಲಿ ತಿಪ್ಪೇಸ್ವಾಮಿ–1, ರೋಷನ್‌ ಜಮೀರ್–2, ಪಾಂಡುರಂಗ–3. ಸಿಪಿಐ ವಿಭಾಗದಲ್ಲಿ ಮೃತ್ಯುಂಜಯ, ನಹಿ ಅಹಮದ್–1, ಸೋಮಶೇಖರಪ್ಪ–2, ಬಾಲಚಂದ್ರನಾಯ್ಕ್–3. ಪಿಎಸ್‌ಐ ವಿಭಾಗದಲ್ಲಿ ಮಂಜುನಾಥ್‌, ಬಸವರಾಜ್–1, ಸುರೇಶ್‌–2, ಮಾರುತಿ,
ವಿಶ್ವನಾಥ್–3. ಸಿಬ್ಬಂದಿ ವಿಭಾಗದಲ್ಲಿ ಮಹಂತೇಶ್‌–1, ರಮೇಶಪ್ಪ, ಪ್ರವೀಣ್‌ಕುಮಾರ್–2, ನೌಶಾದ್–3.

4x100 ರೀಲೆ: ಪುರುಷರ ವಿಭಾಗದಲ್ಲಿ ಚಿತ್ರದುರ್ಗ ಉಪ ವಿಭಾಗ–1, ಚಳ್ಳಕೆರೆ ಉಪ ವಿಭಾಗ–2. ಮಹಿಳೆಯರ ವಿಭಾಗದಲ್ಲಿ ಚಿತ್ರದುರ್ಗ ಉಪ ವಿಭಾಗ–1, ಹಿರಿಯೂರು ಉಪ ವಿಭಾಗ–2.

ಕಬಡ್ಡಿ: ಡಿಎಆರ್ ಚಿತ್ರದುರ್ಗ–1.

ವಾಲಿಬಾಲ್: ಚಳ್ಳಕೆರೆ ಉಪ ವಿಭಾಗ–1. ಟಗ್ ಆಫ್‌ ವಾರ್: ಚಿತ್ರದುರ್ಗ ಡಿಎಆರ್‌–1, ಹಿರಿಯೂರು ಉಪ ವಿಭಾಗ–2.

ವೈಯಕ್ತಿಕ ಚಾಂಪಿಯನ್ ಶಿಪ್‌ನ ಪುರುಷ ವಿಭಾಗದಲ್ಲಿ ಚಿತ್ರದುರ್ಗ ಉಪ ವಿಭಾಗದ ಪ್ರವೀಣ್‌ಕುಮಾರ್, ಮಹಿಳಾ ವಿಭಾಗದಲ್ಲಿ ಹಿರಿಯೂರು ಉಪ ವಿಭಾಗದ ಪಿ. ಅಂಬುಜಾ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.