ಹಿರಿಯೂರು: ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಭಾನುವಾರ ನಡೆದ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಕೇರಳದ ವಯನಾಡ್‌ನ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು.
ಮೇಘಶ್ರೀ ಅವರ ಪತಿ ವಿಕ್ರಂ ಸಿಂಹ ಹರ್ತಿಕೋಟೆಯವರು. ಇವರು ವಯನಾಡ್ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪತಿ ಹಾಗೂ ಪತ್ನಿ ಸಾಮಾನ್ಯರಂತೆ ಸಾಲಿನಲ್ಲಿ ಕೈ ಹಿಡಿದು ನಿಂತಿದ್ದು ಗಮನ ಸೆಳೆಯಿತು.
‘ಕೇರಳದಲ್ಲಿ ಓಣಂ ಹಬ್ಬದ ಪ್ರಯುಕ್ತ ನಾಲ್ಕು ದಿನ ರಜೆ ಇದೆ. ಆದ್ದರಿಂದ ಪತ್ನಿ ಮೇಘಶ್ರೀಯೊಂದಿಗೆ ಹುಟ್ಟೂರು ಹರ್ತಿಕೋಟೆಗೆ ಬಂದಿದ್ದೇನೆ. ನಮ್ಮೂರಿನ ಮೂಲಕವೇ ಮಾನವ ಸರಪಳಿ ಹಾದು ಹೋಗಿದ್ದು ತಿಳಿಯಿತು. ದೇಶದ ಪ್ರಜೆಗಳಾಗಿ, ಇದನ್ನು ಕರ್ತವ್ಯವೆಂದು ಭಾವಿಸಿ ಇಬ್ಬರೂ ಪಾಲ್ಗೊಂಡಿದ್ದೆವು’ ಎಂದು ವಿಕ್ರಂ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.