ಧರ್ಮಪುರ: ಬೀಜೋತ್ಪಾದನೆ ಉದ್ದೇಶದಿಂದ ಬೆಳೆದಿರುವ ಕಡಲೆಗೆ ಉತ್ತಮ ಖರೀದಿ ದರ ನಿಗದಿಪಡಿಸುವಂತೆ ಕೋರಿ ಬೆಂಗಳೂರಿನ ಬೀಜ ನಿಗಮದ ಪ್ರಧಾನ ವ್ಯವಸ್ಥಾಪಕರಿಗೆ ಧರ್ಮಪುರ ಹೋಬಳಿಯ ರೈತರು ಈಚೆಗೆ ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗ ಬೀಜ ನಿಗಮದಿಂದ ರೈತರು ಕಡಲೆ ಖರೀದಿಸಿದ್ದು, ಉತ್ತಮ ಬೆಳೆ ತೆಗೆದಿದ್ದಾರೆ. ಒಪ್ಪದಂತೆ ಬೀಜ ನಿಗಮಕ್ಕೆ ನಾವು ಕಡಲೆಯನ್ನು ಕೊಟ್ಟಿದ್ದೇವೆ. ಆದರೆ, ಒಂದು ಕ್ವಿಂಟಲ್‌ಗೆ 8,000 ನೀಡಿ ಖರೀದಿಸುವುದಾಗಿ ಹೇಳಿದ್ದ ಅಧಿಕಾರಿಗಳು ಈಗ ₹7,200 ನಿಗದಿ ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಕಡಲೆ ಬೆಳೆ ಬೆಳೆಯಲು ಸಾಕಷ್ಟು ಖರ್ಚು ಬಂದಿದೆ. ಆದ್ದರಿಂದ ಕನಿಷ್ಟ ₹8,500 ನಿಗದಿ ಮಾಡಬೇಕು ಎಂದು ಹೂವಿನಹೊಳೆಯ ರೈತರು ಮನವಿಪತ್ರದಲ್ಲಿ ಆಗ್ರಹಿಸಿದ್ದಾರೆ.
ರೈತರಾದ ರವೀಂದ್ರಪ್ಪ, ತಿಪ್ಪಣ್ಣ, ವಿ.ನಾಗರಾಜು, ನಾಗಶ್ರೀ, ರೂಪಾ, ರಾಮಕೃಷ್ಣೇಗೌಡ, ಲೋಕೇಶ್ ಗೌಡ, ರಾಜೀವ್, ಶಾರದಮ್ಮ, ಭಾಗ್ಯಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.