ADVERTISEMENT

ಚಳ್ಳಕೆರೆ | ಒಳಚರಂಡಿ ಕಾಮಗಾರಿ: ₹260 ಕೋಟಿ ಅನುದಾನ ಬಿಡುಗಡೆಗೆ ರಘುಮೂರ್ತಿ ಮನವಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:00 IST
Last Updated 12 ಡಿಸೆಂಬರ್ 2024, 16:00 IST
ಟಿ.ರಘುಮೂರ್ತಿ
ಟಿ.ರಘುಮೂರ್ತಿ   

ಚಳ್ಳಕೆರೆ: ನಗರದ ವಿವಿಧ ವಾರ್ಡ್‌ಗಳಿಗೆ ಚರಂಡಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ₹260 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಸರ್ಕಾರಕ್ಕೆ ಮನವಿ ಮಾಡಿದರು. 

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ಚಳಿಗಾಲದ ಅಧಿವೇಶನದಲ್ಲಿ ಅವರು ಈ ಬಗ್ಗೆ ಸರ್ಕಾರದ ಗಮನ ಸೆಳೆದರು. 

ಒಳಚರಂಡಿ ಕಾಮಗಾರಿ ಯೋಜನೆಗಳಿಗೆ ಈ ಹಿಂದೆ ₹197 ಕೋಟಿ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗುತ್ತು. ಇದೀಗ ಯೋಜನಾ ವೆಚ್ಚ ₹253 ಕೋಟಿ ಆಗಿದೆ. ಪ್ರಸ್ತುತ ಯೋಜನೆ ಜಾರಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎಂದು ರಘುಮೂರ್ತಿ ತಿಳಿಸಿದರು. 

ADVERTISEMENT

ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್, 2015ರಲ್ಲಿ ಒಳಚರಂಡಿ ಯೋಜನೆಗೆ ₹100 ಕೋಟಿ ವೆಚ್ಚವನ್ನು  ಅಂದಾಜಿಸಲಾಗಿತ್ತು. ಇದೀಗ ₹260 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಹಣಕಾಸು ಇಲಾಖೆಯ ಸಲಹೆ ಪಡೆದ ನಂತರ ಹಣಕಾಸಿನ ಲಭ್ಯತೆ ನೋಡಿಕೊಂಡು ಈ ಯೋಜನೆ ಜಾರಿಗೆ ಕ್ರಮವ ಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಆಸಕ್ತಿ ವಹಿಸಿ ಈ ಯೋಜನೆ ಜಾರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಮುಖ್ಯಮಂತ್ರಿಗೆ ಮತ್ತೊಮ್ಮೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.