
ಪ್ರಜಾವಾಣಿ ವಾರ್ತೆ
ಶ್ರೀರಾಂಪುರ: ಇಲ್ಲಿನ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಏಕನಾಥೇಶ್ವರಿ-ಯಲ್ಲಮ್ಮ ದೇವಿಯ ಹೊಳೆಪೂಜೆ ಉತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಮುಂಜಾನೆ ಗಿರಿಮಲ್ಲನಪಾಳ್ಯ ಗ್ರಾಮದ ಬಳಿಯ ಅಯ್ಯನಕೆರೆ ಮಜ್ಜನಬಾವಿಯಲ್ಲಿ ಗಂಗಾಪೂಜೆ, ಗಣಪತಿಪೂಜೆ, ಪುಣ್ಯಾಹ, ಸ್ಥಿರಬಿಂಬ ಪೂಜೆ, ಪ್ರಾಣ ಪ್ರತಿಷ್ಠಾಪನೆ, ಬಲಿಪ್ರಧಾನ ಕಾರ್ಯಗಳು ನಡೆದವು.
ನಂತರ ಹೊಳೆ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ದೇವಿಯ ಕಳಶ ಸಮೇತ ದೇವಿಕೆರೆ ಬೀರಲಿಂಗೇಶ್ವರಸ್ವಾಮಿ ಹಾಗೂ ಯಲ್ಲಮ್ಮ ದೇವಿಯ ನಡೆಮುಡಿ ಉತ್ಸವದೊಂದಿಗೆ ದೇವಾಲಯ ಪ್ರವೇಶ ಮಾಡಿ ದೇವಿಯ ಪೀಠಾರೋಹಣ ಮಾಡಲಾಯಿತು.
ಬಳಿಕ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.