ADVERTISEMENT

ಚಿತ್ರದುರ್ಗ: ವಿಜೃಂಭಣೆಯ ಚನ್ನಕೇಶವಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:28 IST
Last Updated 6 ಫೆಬ್ರುವರಿ 2023, 5:28 IST
ಚಿತ್ರದುರ್ಗದ ಸಿ.ಕೆ. ಪುರ ಬಡಾವಣೆಯ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀದೇವಿ, ಭೂದೇವಿ ಸಹಿತದೊಂದಿಗೆ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವ. ‌
ಚಿತ್ರದುರ್ಗದ ಸಿ.ಕೆ. ಪುರ ಬಡಾವಣೆಯ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀದೇವಿ, ಭೂದೇವಿ ಸಹಿತದೊಂದಿಗೆ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವ. ‌   

ಚಿತ್ರದುರ್ಗ: ನಗರದ ಸಿ.ಕೆ. ಪುರದಲ್ಲಿ ಭಾನುವಾರ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಹೂವುಗಳಿಂದ ಅಲಂಕರಿಸಿದ್ದ ಬ್ರಹ್ಮರಥದಲ್ಲಿ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಸಕಲ ವಾದ್ಯಗಳೊಂದಿಗೆ ಮಧ್ಯಾಹ್ನ 1.15ಕ್ಕೆ ಅರ್ಚಕರು ಮಂತ್ರ ಘೋಷ ಮೊಳಗಿಸುತ್ತಿದ್ದಂತೆ ಭಕ್ತರು ರಥವನ್ನು ಎಳೆದು ಪುನೀತರಾದರು. ಭಕ್ತರು ಬಾಳೆಹಣ್ಣು ಹೂವುಗಳನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಚನ್ನಕೇಶವಸ್ವಾಮಿ ದೇವಸ್ಥಾನದಿಂದ ಕೆಳಗೋಟೆ ಅಡ್ಡರಸ್ತೆಯವರೆಗೆ ರಥವನ್ನು ಎಳೆದು ಮೂಲ ಸ್ಥಾನಕ್ಕೆ ಕರೆತರಲಾಯಿತು.

ADVERTISEMENT

ಮಹೋತ್ಸವದ ಪ್ರಯುಕ್ತ ಶನಿವಾರ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವ ಹಾಗೂ ಉಯ್ಯಾಲೋತ್ಸವ ಜರುಗಿತು. ಬೆಳಿಗ್ಗೆ ಅಂಕುರಾರ್ಪಣ, ಧ್ವಜಾರೋಹಣ, ಗಂಗಾಪೂಜೆ, ಕಲಶ ಸ್ಥಾಪನೆ ಮತ್ತು ನವಗ್ರಹ ಪೂಜೆ, ವಾಸ್ತು ಶಾಂತಿ ಹೋಮ ರಾಕ್ಷೋಘ್ನ ಹೋಮ ಸೇರಿ ಮತ್ತಿತರ ಪೂಜಾ ಕೈಂಕರ್ಯಗಳು ಜರುಗಿದವು.

ಮಧ್ಯಾಹ್ನ ಕೆಳಗೋಟೆಯ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ರಥೋತ್ಸವದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಕೀಲ ಫಾತ್ಯರಾಜನ್, ಮಾರುತೇಶ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.