ADVERTISEMENT

ಅಡಿಕೆ ಆಮದಿಗೆ ರೈತರ ವಿರೋಧ

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 4:51 IST
Last Updated 2 ಅಕ್ಟೋಬರ್ 2022, 4:51 IST
ಹಿರಿಯೂರು ತಾಲ್ಲೂಕಿನ ಕಸವನಹಳ್ಳಿಯಲ್ಲಿ ಅಡಿಕೆ ಬೆಳೆಗಾರರು ಅಡಿಕೆ ಆಮದು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಹಿರಿಯೂರು ತಾಲ್ಲೂಕಿನ ಕಸವನಹಳ್ಳಿಯಲ್ಲಿ ಅಡಿಕೆ ಬೆಳೆಗಾರರು ಅಡಿಕೆ ಆಮದು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಹಿರಿಯೂರು:ಕೇಂದ್ರ ಸರ್ಕಾರ ಭೂತಾನ್ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಹೊರಟಿರುವ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಕಸವನಹಳ್ಳಿಯಲ್ಲಿ ಅಡಿಕೆ ಬೆಳೆಗಾರರು ಶುಕ್ರವಾರ ಅಡಿಕೆ ಗೊಂಚಲುಗಳನ್ನು ರಾಶಿ ಹಾಕಿ ಕೇಂದ್ರದ ಸರ್ಕಾರದ ವಿರುದ್ಧ ಪ್ರತಿಭಟನೆನಡೆಸಿದರು.

‘ಭೂತಾನ್‌ನಿಂದ ತೆರಿಗೆ ವಿಧಿಸದೆ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದುರದೃಷ್ಟಕರ. ಕೊಳವೆಬಾವಿಯಲ್ಲಿ ಸಿಗುತ್ತಿದ್ದ ಅಲ್ಪಸ್ವಲ್ಪ ನೀರು ಬಳಸಿ ಕಷ್ಟಪಟ್ಟು ಅಡಿಕೆ ತೋಟ ಬೆಳೆಸಿದ್ದೇವೆ.
ತೋಟಗಳ ನಿರ್ವಹಣಾ ವೆಚ್ಚ ಐದಾರು ಪಟ್ಟು ಹೆಚ್ಚಿದೆ. ಧಾರಣೆ ಹೆಚ್ಚಿರುವ ಕಾರಣ ಅಡಿಕೆ
ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ. ಇಂತಹ ಸ್ಥಿತಿಯಲ್ಲಿ ಹೊರ ದೇಶಗಳಿಂದ ಅಡಿಕೆ ತರಿಸಿಕೊಂಡಲ್ಲಿ ಧಾರಣೆ ಕುಸಿದು ಬೆಳೆಗಾರರುಬೀದಿಗೆ ಬೀಳಬೇಕಾಗುತ್ತದೆ’ ಎಂದುಕೆ.ರಮೇಶ್ ಆತಂಕವ್ಯಕ್ತಪಡಿಸಿದರು.

‘ಒಮ್ಮೆ ಅಡಿಕೆ ಸಸಿ ನಾಟಿ ಮಾಡಿದರೆ ಫಸಲು ಪಡೆಯಲು ಎಂಟು ವರ್ಷ ಕಾಯಬೇಕು. ನಂತರವೂ ಕೊಳೆರೋಗ ಕಾಣಿಸಿಕೊಂಡರೆ ಬೆಳೆ ಕೈಗೆ ಬರುವ ಖಚಿತತೆ ಇಲ್ಲ. ಅಡಿಕೆಗೆ ನೀರು ಕಡಿಮೆಯಾದರೂ ಕಷ್ಟ. ಹೆಚ್ಚಾದರೂ ಕಷ್ಟ. ಕೇಂದ್ರ ಸರ್ಕಾರ ಆಮದು ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಅಡಿಕೆ ಬೆಳೆಗಾರರಾದ ಕೆ.ಸಿ. ರುದ್ರೇಶ್, ಆರ್. ಪ್ರಕಾಶ್, ವೀರಣ್ಣಗೌಡ, ಬಸವರಾಜ್, ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.