ADVERTISEMENT

ಹೊಳಲ್ಕೆರೆ: ವನ್ಯಜೀವಿ ಬೇಟೆ, ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 10:00 IST
Last Updated 4 ನವೆಂಬರ್ 2022, 10:00 IST
   

ಹೊಳಲ್ಕೆರೆ: ವನ್ಯಜೀವಿಗಳನ್ನು ಬೇಟೆಯಾಡಿ ಚರ್ಮ, ಕೊಂಬು ಹಾಗೂ ಚಿಪ್ಪುಗಳನ್ನು ಹೊಸ ರಾಜ್ಯಕ್ಕೆ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಹಿರಿಯೂರಿನ ಮಾರುತಿ ನಗರದ ನಿವಾಸಿ ಶಿವಕುಮಾರ್ (40), ಚಳ್ಳಕೆರೆ ತಾಲ್ಲೂಕಿನ ಕಮತ್ತ ಮರಿಕುಂಟೆಯ ಗಿರೀಶ್ (30), ಹಿರೇಹಿಂದಳ ಹಟ್ಟಿಯ ತಿಪ್ಪಯ್ಯ (24), ಹಿರೇಹಿಂದಳ ಹಟ್ಟಿಯ ತಿಪ್ಪಯ್ಯ (36), ಚಿಕ್ಕ ಉಳ್ಳಾರ್ತಿಯ ಎಸ್.ಮಂಜುನಾಥ್ (23) ಬಂಧಿತರು.

ಆರೋಪಿಗಳಿಂದ 2.3 ಕೆ.ಜಿ. ಚಿಪ್ಪಿನ ಹಂದಿಯ ಚಿಪ್ಪು, 4 ಕೃಷ್ಣಮೃಗಗಳ ಚರ್ಮ, ಜೋಡಿ ಕೊಂಬು ಇರುವ 2 ಕೊಂಬುಗಳು, ಒಂಟಿಕೊಂಬಿನ ಒಂದು ಕೊಂಬು, ಒಂದು ಕೃಷ್ಣಮೃಗ, 2 ನಾಡ ಬಂದೂಕು, ಬಂದೂಕು ತಯಾರಿಕೆಗೆಗೆ ಬಳಸುವ 3 ಮರದ ಬಂದೂಕಿನ ಬಿಡಿಭಾಗಗಳು, ಎರಡು ದ್ವಿಚಕ್ರ ವಾಹನ, 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.