ADVERTISEMENT

ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

ಎನ್‌ಪಿಎಸ್ ನೌಕರರಿಂದ ಶಾಸಕ ಎಂ. ಚಂದ್ರಪ್ಪಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 6:39 IST
Last Updated 11 ಡಿಸೆಂಬರ್ 2022, 6:39 IST
ಹೊಳಲ್ಕೆರೆಯಲ್ಲಿ ಶನಿವಾರ ಎನ್‌ಪಿಎಸ್ ನೌಕರರು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಶಾಸಕ ಎಂ. ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಹೊಳಲ್ಕೆರೆಯಲ್ಲಿ ಶನಿವಾರ ಎನ್‌ಪಿಎಸ್ ನೌಕರರು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಶಾಸಕ ಎಂ. ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.   

ಹೊಳಲ್ಕೆರೆ: ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಎನ್‌ಪಿಎಸ್ ನೌಕರರು ಶಾಸಕ ಎಂ. ಚಂದ್ರಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

‘2006ರ ಏಪ್ರಿಲ್‌ನಿಂದ ಆಯ್ಕೆಯಾದ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಈ ಯೋಜನೆಯಿಂದ ನೌಕರರಿಗೆ ಅಭದ್ರತೆ ಕಾಡುತ್ತಿದೆ. ಹೊಸ ಪಿಂಚಣಿ ಯೋಜನೆಯಿಂದ ನೌಕರರು ನಿವೃತ್ತಿ ಕಾಲವನ್ನು ನೆಮ್ಮದಿಯಿಂದ ಕಳೆಯಲು ಆಗುವುದಿಲ್ಲ. ರಾಜಸ್ಥಾನ, ಛತ್ತೀಸ್ ಗಡ, ಜಾರ್ಖಂಡ್, ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಹೊಸ ಪಿಂಚಣಿ ಯೋಜನೆ ರದ್ದುಪಡಿಸಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲೂ ಹೊಸ ಪಿಂಚಣಿ ಯೋಜನೆ ರದ್ದುಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು’ ಎಂದು ನೌಕರರು ಮನವಿ
ಮಾಡಿದರು.

ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪ್ರಭು, ಉಪಾಧ್ಯಕ್ಷೆ ಮೋಕ್ಷದಾಯಿನಿ, ಕಾರ್ಯದರ್ಶಿ ಆರ್.ಬಿ. ನಾಗರಾಜ್, ಕೆ.ಮಹೇಶ್, ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್. ಚಂದ್ರಶೇಖರ್, ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಜಯಪ್ಪ, ಎನ್.ಶಿವಕುಮಾರ ನಾಯ್ಕ್, ಆರ್.ಸ್ವಾಮಿ, ಎಂ.ಕೆ.ರಂಗನಾಥ್, ಕೃಷ್ಣಮೂರ್ತಿ, ಕರಿಸಿದ್ದಯ್ಯ ಒಡೆಯರ್, ಭೈರೇಶ್ ಹಾಗೂ ಎನ್‌ಪಿಎಸ್ ನೌಕರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.