
ಶೃಂಗೇರಿ ಶಾರದಾಪೀಠದ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಡಿಸೆಂಬರ್ 7 ರಂದು ಚಿತ್ರದುರ್ಗದಲ್ಲಿ 1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.
ಬೆಂಗಳೂರು: ಶೃಂಗೇರಿ ಶಾರದಾಪೀಠದ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಡಿಸೆಂಬರ್ 7 ರಂದು ಚಿತ್ರದುರ್ಗದಲ್ಲಿ 1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಹಾಗೂ ಶೃಂಗೇರಿ ಶಾರದಾಪೀಠದ ಸಹಾಯದಿಂದ ನಡೆಸಿದ ಈ ಕಾರ್ಯಕ್ರಮವು ಧಾರ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯಕ್ಕೆ ಮಾದರಿಯಾಯಿತು ಎಂದು ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿ ಹೇಳಿದರು.
ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು ವಿಡಿಯೋ ಮಾಧ್ಯಮದ ಮೂಲಕ ನವದಂಪತಿಗಳಿಗೆ ಆಶೀರ್ವಚನ ನೀಡಿದರು.
ರೈತರ ಸಾಮೂಹಿಕ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮ ನಡೆದಿರುವುದು ಬಹಳ ಸಂತೋಷದ ವಿಷಯ. ವಿವಾಹವು ನಮ್ಮ ಧರ್ಮಪರಂಪರೆಯಲ್ಲಿ ಅತ್ಯಂತ ಮಹತ್ವದ ಸಂಸ್ಕಾರ. ಮಾನವನ ಬುದ್ಧಿಯೇ ಅವನ ಮಹಾ ಶಕ್ತಿ, ಅದನ್ನು ಧಾರ್ಮಿಕ ಆಚರಣೆಯಲ್ಲಿ ಬಳಸಿದಾಗಲೇ ಶ್ರೇಯಸ್ಸು ದೊರಕುತ್ತದೆ ಎಂದು ಅನುಗ್ರಹಿಸಿದರು.
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಅಧ್ಯಕ್ಷರಾದ ಚಂದ್ರಶೇಖರ್ ಅವರು, ಉಭಯ ಜಗದ್ಗುರುಗಳ, ಶಾರದಾಂಬೆಯ ಆಶೀರ್ವಾದವನ್ನು ಪ್ರಸಾದದ ಮೂಲಕ ನಮಗೆ ತಲುಪಿಸಿದ್ದು ಮರೆಯಲಾರದ ಕ್ಷಣ ಎಂದರು.
ಇಂದೊಂದು ಅಭೂತಪೂರ್ವವಾದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿ ಆರಂಭದ ಹಂತದಿಂದ ಅಂತಿಮ ಕ್ಷಣವರೆಗೂ ಸಂಪೂರ್ಣ ಬೆಂಬಲ ನೀಡಿ ಅನೇಕ ವ್ಯವಸ್ಥೆಗಳ ವೆಚ್ಚವನ್ನು ಭರಿಸಿದ ಶಾರದಾಪೀಠಕ್ಕೆ ಅನಂತ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.
ವಿವಾಹ ಕಾರ್ಯಕ್ರಮವು ಲಕ್ಷ್ಮೀಶ ತಂತ್ರಿಗಳ ಸಾನಿಧ್ಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಹೋಮವನ್ನು ನೆರವೇರಿಸಲಾಯಿತು. ಸಭೆಯನ್ನುದ್ದೇಶಿಸಿ ಧಾರವಾಡದ ವಾಚಸ್ಪತಿ ಶಾಸ್ತ್ರಿಗಳು ಮಾತನಾಡಿದರು. ವೇದಬ್ರಹ್ಮ ಕೆ.ಎಲ್. ಶ್ರೀನಿವಾಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.