ADVERTISEMENT

ಮರುಬಳಕೆ ವಸ್ತುಗಳ ಸಂಗ್ರಹ ಕಾರ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮೇ 2023, 14:04 IST
Last Updated 26 ಮೇ 2023, 14:04 IST
ಚಳ್ಳಕೆರೆ ನಗರಸಭೆ ವತಿಯಿಂದ ಗುರುವಾರ ನಡೆದ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮಕ್ಕೆ ಪೌರಾಯುಕ್ತ ರಾಮಕೃಷ್ಣ ಸಿದ್ದಹೊಳ್ಳ ಚಾಲನೆ ನೀಡಿದರು.
ಚಳ್ಳಕೆರೆ ನಗರಸಭೆ ವತಿಯಿಂದ ಗುರುವಾರ ನಡೆದ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮಕ್ಕೆ ಪೌರಾಯುಕ್ತ ರಾಮಕೃಷ್ಣ ಸಿದ್ದಹೊಳ್ಳ ಚಾಲನೆ ನೀಡಿದರು.   

ಚಳ್ಳಕೆರೆ: ಮನೆಯಲ್ಲಿ ಬಳಕೆ ಮಾಡಿದ ವಸ್ತು ಹಾಗೂ ಇತರ ಸಾಮಗ್ರಿಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಮರುಬಳಕೆ ಮಾಡಿಕೊಳ್ಳಲು ನಗರಸಭೆಗೆ ನೀಡಬೇಕು ಎಂದು ಪೌರಾಯುಕ್ತ ರಾಮಕೃಷ್ಣ ಸಿದ್ದನಹೊಳ್ಳ ಮನವಿ ಮಾಡಿದರು.

ನಗರಸಭೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ನನ್ನ ಲೈಪ್ ನನ್ನ ಸ್ವಚ್ಛತಾ ನಗರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಡಿದರು.

ಮರುಬಳಕೆ ವಸ್ತುಗಳನ್ನು ಸಂಗ್ರಹಿಸುವ ಸಲುವಾಗಿ ನಗರದ ತ್ಯಾಗರಾಜ ನಗರ, ಬಾಪೂಜಿ ಕಾಲೇಜು, ಸಂತೆ ಮೈದಾನ, ವಾಸವಿ ಶಾಲೆ ಸೇರಿ ನಗರದಲ್ಲಿ 5 ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ಸಂಗ್ರಹಸಿದ ವಸ್ತುಗಳನ್ನು ಕಡಿಮೆ ಬಳಕೆ, ಮರುಬಳಕೆ ಹಾಗೂ ಪುನರ್ ಬಳಕೆ ಹೀಗೆ ಮೂರು ಬಗೆಯಲ್ಲಿ ವಿಂಗಡಿಸಲಾಗುವುದು ಎಂದು ಹೇಳಿದರು.

ADVERTISEMENT

ಮಕ್ಕಳ ಆಟಿಕೆ ಹಾಗೂ ಮರುಬಳಕೆಗೆ ಯೋಗ್ಯವಾದ ಹಳೆ ಪುಸ್ತಕಗಳನ್ನು ನೀಡಿದರೆ ಆ ಪುಸ್ತಕಗಳನ್ನು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಚೆನ್ನಾಗಿರುವ ಬಟ್ಟೆಯನ್ನು ಅನಾಥಶ್ರಮಕ್ಕೆ ನೀಡಲಾಗುವುದು ಎಂದು ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಹೇಳಿದರು. 

ನಗರಸಭೆ ಸದಸ್ಯ ಎಸ್. ಜಯಣ್ಣ, ರಮೇಶ್‍ಗೌಡ ಮಾತನಾಡಿದರು. ಮುಖಂಡ ಶಿವಕುಮಾರ್, ಮಂಜುಳಾ, ಪಾಲಮ್ಮ, ಸಾವಿತ್ರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.