ADVERTISEMENT

ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಗೋಪೂಜೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 4:14 IST
Last Updated 7 ನವೆಂಬರ್ 2021, 4:14 IST
ನಾಯಕನಹಟ್ಟಿ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಗೋ ಪೂಜೆ ನಡೆಸಲಾಯಿತು
ನಾಯಕನಹಟ್ಟಿ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಗೋ ಪೂಜೆ ನಡೆಸಲಾಯಿತು   

ನಾಯಕನಹಟ್ಟಿ: ಪ್ರಸಿದ್ಧ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಗೋಧೋಳಿ ಸಮಯದಲ್ಲಿ ಶುಕ್ರವಾರ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.

ದೇವಾಲಯದ ಒಳಮಠದ ಮುಂಭಾಗದಲ್ಲಿ ಗೋವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲು ಸಕಲ ಸಿದ್ಧತೆ ಮಾಡಲಾಗಿತ್ತು. ದೇವಸ್ಥಾನದ ಸಿಬ್ಬಂದಿ, ಅರ್ಚಕರು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ಒಂಬತ್ತು ಗೋವುಗಳನ್ನು ಒಳಮಠದ ಮುಂಭಾಗ ಕರೆತರಲಾಯಿತು. ಅದಕ್ಕೆ ಪುಷ್ಪಾಲಂಕಾರ ನೆರವೇರಿಸಿದ ನಂತರ ಅರ್ಚಕರು ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.

ADVERTISEMENT

ಪೂಜೆಯ ನಂತರ ಗ್ರಾಮದ ಮುಖಂಡರು ಸಂಪ್ರದಾಯ ಬದ್ಧವಾಗಿ ಗೋವುಗಳಿಗೆ ಅಕ್ಕಿ ಹಾಗೂ ಬೆಲ್ಲವನ್ನು ನೀಡಿದರು. ಒಳಮಠದ ಪ್ರಾಂಗಣದಲ್ಲಿ ಕರಡಿವಾದ್ಯಗಳೊಂದಿಗೆ ಗೋವುಗಳನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.

ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

‘ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗೋವುಗಳು ಸಂಸ್ಕೃತಿಯ ಪ್ರತೀಕವಾಗಿವೆ. ಸರ್ಕಾರ ಗೋಪೂಜಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯ’ ಎಂದು ಅಭಿಷೇಕ ಮಂಟಪದ ಅರ್ಚಕರಾದ ಮಹಾಂತೇಶ ದಿವಾಕರ ಹೇಳಿದರು.

ದೇವಸ್ಥಾನದ ಸಿಬ್ಬಂದಿ ಎಸ್. ಸತೀಶ್, ಮಂಜುನಾಥ್, ಅರ್ಚಕರಾದ ತಿಪ್ಪೇಸ್ವಾಮಿ, ಅಭಿಷೇಕ್, ಶಿವಲಿಂಗಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.