ಹೊಸದುರ್ಗ: ‘ಸರ್ಕಾರಿ ಜಾಗದಲ್ಲಿ ಶಾಸಕರ ಸಂಬಂಧಿಕರು, ಅನುಯಾಯಿಗಳು ಅನಧಿಕೃತ ಬಡಾವಣೆ ಮಾಡುವುದು, ಅನಧಿಕೃತವಾಗಿ ಮಣ್ಣು ಹೊಡೆಯುವುದು ಸೇರಿ ಹಲವು ಕಾರ್ಯಗಳಿಗೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಬೇಕು’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಕ್ಯಾದಿಗೆರೆ ಕಾವಲ್ ಬಳಿ ರಾತ್ರಿಯಿಡಿ ವಿಪರೀತ ಮಣ್ಣು ಸಾಗಿಸಲಾಗುತ್ತಿದೆ. ಗೊರವಿನಕಲ್ಲು, ಕೆಲ್ಲೋಡು, ಸಿದ್ಧಪ್ಪನ ಬೆಟ್ಟ, ಸದ್ಗುರು ಸೇವಾಶ್ರಮ ಆಸ್ಪತ್ರೆ ಪಕ್ಕದಲ್ಲಿನ ಸರ್ಕಾರಿ ಸ್ಥಳಗಳನ್ನು ಶಾಸಕ ಬಿ.ಜಿ. ಗೋವಿಂದಪ್ಪ ಅವರ ಅನುಯಾಯಿಗಳು (ಫಾಲೋವರ್ಸ್) ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಶಾಸಕ ಬಿ.ಜಿ.ಗೋವಿಂದಪ್ಪ ಚುನಾವಣೆಗಾಗಿ ₹ 20 ಕೋಟಿ ವ್ಯಯಿಸಿದ್ದಾರೆ. ಜನರೇನು ಸುಮ್ಮನೆ ಮತ ಹಾಕಿಲ್ಲ. ₹ 500 ಕೊಟ್ಟಿರುವುದಾಗಿ ಸ್ವತಃ ಶಾಸಕರೇ ಬಹಿರಂಗ ಹೇಳಿಕೆ ನೀಡಿದ್ದಾರೆ’ ಎಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.