ಚಿತ್ರದುರ್ಗ: ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲ್ಲೂಕಿನ ಚಿಕ್ಕೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿ ಕುಸಿದಿದೆ.
ರಾತ್ರಿ ಆರಂಭವಾದ ಮಳೆಗೆ ಮೂರು ಕೊಠಡಿಗಳಿಗೆ ಹಾನಿಯಾಗಿದೆ. ಚಾವಣಿಗೆ ಹಾಕಿದ ಶೀಟುಗಳು ಹಾರಿ ಹೋಗಿವೆ. ಈಚೆಗೆ ಈ ಚಾವಣಿ ದುರಸ್ಥಿ ಮಾಡಲಾಗಿತ್ತು.
ಪಕ್ಕದ ಗ್ರಾಮ ದೊಡ್ಡಾಲಘಟ್ಟದಲ್ಲೂ ಆರು ಮನೆಗಳಿಗೆ ಹಾನಿಯಾಗಿದೆ. ಕಬ್ಬಿಣದ ತುಂಡು ಬಿದ್ದು ರಂಗಪ್ಪ ಎಂಬುವರು ಗಾಯಗೊಂಡಿದ್ದಾರೆ.
ಭಾರಮಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.