ADVERTISEMENT

ಚಿತ್ರದುರ್ಗ: ಪುರ ಪ್ರವೇಶಿಸಿದ ಹಿಂದೂ ಮಹಾಗಣಪತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:19 IST
Last Updated 10 ಸೆಪ್ಟೆಂಬರ್ 2021, 5:19 IST
ಹಿಂದೂ ಮಹಾಗಣಪತಿಯನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಹಿಂದೂ ಮಹಾಗಣಪತಿಯನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು.   

ಚಿತ್ರದುರ್ಗ: ಇಲ್ಲಿನ ಬಿ.ಡಿ.ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಪ್ರತಿಷ್ಠಾಪಿಸುತ್ತಿರುವ ಹಿಂದೂ ಮಹಾಗಣಪತಿ ಗುರುವಾರ ಪುರ ಪ್ರವೇಶಿಸಿತು. ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಗಣೇಶಮೂರ್ತಿಯನ್ನು ಸ್ವಾಗತಿಸಿದರು.

ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಬಂದ ಗಣೇಶಮೂರ್ತಿಗೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು. ತ್ರಿಶೂಲ ಹಿಡಿದಿರುವ ಗಣೇಶಮೂರ್ತಿ ಸುಮಾರು ಎಂಟು ಅಡಿಗೂ ಹೆಚ್ಚು ಎತ್ತರವಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡ ಉಲ್ಲಂಘನೆಯಾಗಿದೆ.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್‌, ಬಿಜೆಪಿ ಮುಖಂಡ ಜಿ.ಎಸ್‌.ಅನಿತ್‌, ಮಾದಾರ ಚನ್ನಯ್ಯ ಗುರುಪೀಠದ ಆಡಳಿತಾಧಿಕಾರಿ ಅನಿಲ್‌ಕುಮಾರ್‌, ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್‌ ಇದ್ದರು. ಗಣೇಶನ ಭಕ್ತರು ಜಯಘೋಷ ಮೊಳಗಿಸಿದರು.

ADVERTISEMENT

ಅಲ್ಲಿಂದ ನೇರವಾಗಿ ಪ್ರತಿಷ್ಠಾಪಿಸಲು ಉದ್ದೇಶಿಸಿದ ಸ್ಥಳಕ್ಕೆ ತರಲಾಯಿತು. ರಸ್ತೆ ಬದಿಯದ್ದ ಜನರು ಮೂರ್ತಿಯನ್ನು ಕಂಡು ಭಕ್ತಿಪೂರ್ವಕವಾಗಿ ನಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.