ಹಿರಿಯೂರು: ಅ.28 ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಒಳಮೀಸಲಾತಿ ಪರವಾಗಿ ದನಿ ಎತ್ತುವಂತೆ ಒತ್ತಾಯಿಸಿ ಅ.26ರಂದು ಬೆಳಿಗ್ಗೆ 11ಕ್ಕೆ ನಗರದ ಅಂಬೇಡ್ಕರ್ ಪ್ರತಿಮೆ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಗುವುದು ಎಂದು ಒಳಮೀಸಲಾತಿ ಹೋರಾಟಗಾರರು ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ನಡೆದ ಹೋರಾಟಗಾರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದಪರ ಇರುವವರು ಎಂಬ ಭಾವನೆ ಇತ್ತು. ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿಗೆ ಹಸಿರು ನಿಶಾನೆ ತೋರಿ, 3 ತಿಂಗಳು ಕಳೆದರೂ, ವಿಳಂಬ ತೋರುತ್ತಿದ್ದಾರೆ. ಅ.28 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ’ ಎಂದು ಮುಖಂಡರು ಎಚ್ಚರಿಸಿದರು.
ಬೋರನಕುಂಟೆ ಜೀವೇಶ್, ಕೆ.ಪಿ.ಶ್ರೀನಿವಾಸ್, ಕೆ.ಆರ್.ರಘುನಾಥ್, ಬ್ಯಾಡರಹಳ್ಳಿ ಹನುಮಂತರಾಯ, ಹೆಗ್ಗೆರೆ ಮಂಜುನಾಥ್, ಈಶ್ವರಗೆರೆ ರಾಘವೇಂದ್ರ, ಕೊನಿಗರಹಳ್ಳಿ ನರಸಿಂಹಮೂರ್ತಿ, ಬೋರನಕುಂಟೆ ಕರಿಯಪ್ಪ, ಮಸ್ಕಲ್ ಮಟ್ಟಿ ಓಂಕಾರ್, ಪಿಟ್ಲಾಲಿ ರಂಗಸ್ವಾಮಿ, ಶಿಡ್ಲಯ್ಯನಕೋಟೆ ಕದುರಪ್ಪ, ಮಸ್ಕಲ್ ಮಟ್ಟಿ ವಿಷ್ಣು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.