ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಶಿಥಿಲವಾಗಿದ್ದ ಹಳೆಯ ಜಾಮಿಯ ಮಸೀದಿ ಕೆಡವಿ ನೂತನವಾಗಿ ನಿರ್ಮಿಸಿರುವ ಮಸೀದಿಯ ಲೋಕಾರ್ಪಣೆ ಅಂಗವಾಗಿ ಅ. 24 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30ರ ವರೆಗೆ ಮಸೀದಿ ವೀಕ್ಷಣೆಗೆ ಸರ್ವ ಧರ್ಮೀಯರಿಗೂ ಅವಕಾಶ ಕಲ್ಪಿಸಲಾಗಿದೆ.
ಮಸೀದಿಯು ವಜ್ರದ ಆಕಾರದಲ್ಲಿರುವ ಕಟ್ಟಡವಾಗಿದ್ದು, ವಕ್ಫ್ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿದೆ. ಶುಕ್ರವಾರ ಧರ್ಮಗುರು ಮೌಲಾನ ಹಜರತ್ ತಲಾಹ ಖಾಸ್ಮಿ ಸಾಹೇಬ್ ವಿಶೇಷ ಪ್ರವಚನ ನೀಡಲಿದ್ದಾರೆ. ಮಸೀದಿ ವೀಕ್ಷಣೆಗೆ ಬರುವ ಸರ್ವ ಧರ್ಮೀಯರಿಗೆ ಇಲ್ಲಿ ನಡೆಯುವ ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಮಸೀದಿ ಆಡಳಿತಾಧಿಕಾರಿ ಮತ್ತು ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.