ಹಿರಿಯೂರು: ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಗೋಪಾಲಪುರ ಗ್ರಾಮದ ಮಾದಿಗ ಜನಾಂಗದ ಗುಡಿಸಲುಗಳನ್ನು ನೆಲಸಮಗೊಳಿಸಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ತಮಟೆ ಚಳವಳಿ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಾದಯಾತ್ರೆ ಮೂಲಕ ತಮಟೆ ಬಡಿದುಕೊಂಡು ತಾಲ್ಲೂಕು ಕಚೇರಿಗೆ ತೆರಳಿದ ಪ್ರತಿಭಟನಕಾರರು ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದರು.
ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ರಾಮಚಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜಕುಮಾರ್, ಸಾಧಿಕ್ ಸೀಮೆಎಣ್ಣೆ, ಲಕ್ಷ್ಮಣ್ ರಾವ್, ಓಂಕಾರಪ್ಪ, ನಿರಂಜನ್, ರಂಗಸ್ವಾಮಿ, ಕೆಂಚಣ್ಣ, ಕೃಷ್ಣಪ್ಪ, ನವೀನ್, ಕೂನಿಕೆರೆ ಎಚ್.ಎಸ್, ಮಾರುತೇಶ್, ಡೆನಿಲಾ, ರಫಿ, ನರಸಿಂಹಮೂರ್ತಿ, ಗುರುಮೂರ್ತಿ, ಸಂದೀಪ, ಸುದೀಪ, ಪ್ರಶಾಂತ್, ಸಾಗರ್, ತಿಪ್ಪೇಸ್ವಾಮಿ ಕಳವಿಬಾಗಿ, ಶಂಕರಪ್ಪ, ಲಕ್ಷ್ಮಣ ಕಳವಿಬಾಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.