ADVERTISEMENT

‘ಕನಸುಗಳ ಈಡೇರಿಕೆಗೆ ಗಂಭೀರ ಪ್ರಯತ್ನ ಮಾಡಿ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 16:05 IST
Last Updated 12 ಏಪ್ರಿಲ್ 2025, 16:05 IST
ಹಿರಿಯೂರಿನ ಸರ್ಕಾರಿ ಪಾಲೆಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಉಪನ್ಯಾಸಕ ಕೆ.ಎಂ. ಜಗನ್ನಾಥ್ ಉದ್ಘಾಟಿಸಿದರು 
ಹಿರಿಯೂರಿನ ಸರ್ಕಾರಿ ಪಾಲೆಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಉಪನ್ಯಾಸಕ ಕೆ.ಎಂ. ಜಗನ್ನಾಥ್ ಉದ್ಘಾಟಿಸಿದರು    

ಹಿರಿಯೂರು: ಇಂದಿನ ಯುಪೀಳಿಗೆಯ ಬಹುಮಂದಿ ನಿರ್ದಿಷ್ಟ ಗುರಿಯತ್ತ ಸಾಗುವ ಪ್ರಯತ್ನ ಮಾಡದೆ ಹತಾಶೆಗೆ ಜಾರುತ್ತಿದ್ದಾರೆ. ದೊಡ್ಡ ಕನಸುಗಳನ್ನು ಹೊಂದಿ ಅವನ್ನು ನನಸಾಗಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕು ಎಂದು ಉಪನ್ಯಾಸಕ ಕೆ.ಎಂ. ಜಗನ್ನಾಥ್ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಡತನವನ್ನೇ ಸವಾಲಾಗಿ ಮಾಡಿಕೊಂಡು ಉನ್ನತ ಸಾಧನೆ ಮಾಡಿದವರ ದೊಡ್ಡ ಪಟ್ಟಿಯೇ ಇದೆ. ಬಡತನವನ್ನೇ ದೊಡ್ಡದು ಮಾಡಿ ಅವಕಾಶಗಳಿಂದ ವಂಚಿತರಾಗಬಾರದು. ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕೌಶಲವನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪ್ರಾಂಶುಪಾಲ ಎನ್. ವಾಸುದೇವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾಗಿದ್ದ ಶಿವರಾಜ್, ಶ್ರೀನಿವಾಸ್, ರಾಕೇಶ್, ಚಿಕ್ಕಕರಿಯಪ್ಪ, ರಾಘವೇಂದ್ರ, ಸವಿತಾ, ರಂಗಶ್ಯಾಮಯ್ಯ, ಚಂದ್ರಶೇಖರ್, ಪವನ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.