ADVERTISEMENT

ವಿಶ್ವ ಜ್ಯೋತಿಗೆ ಮಾನವೀಯತೆಯೇ ಅಸ್ತ್ರ: ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 3:54 IST
Last Updated 7 ನವೆಂಬರ್ 2021, 3:54 IST
ಚಿತ್ರದುರ್ಗದ ಮುರುಘಾಮಠದಲ್ಲಿ ಶುಕ್ರವಾರ ಸಾಮೂಹಿಕ ಕಲ್ಯಾಣ ನಡೆಯಿತು. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಇದ್ದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಶುಕ್ರವಾರ ಸಾಮೂಹಿಕ ಕಲ್ಯಾಣ ನಡೆಯಿತು. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಇದ್ದರು.   

ಚಿತ್ರದುರ್ಗ: ‘ಜಾತಿಯ ಜ್ಯೋತಿ ಸೀಮಿತ. ಧಾರ್ಮಿಕ ಜ್ಯೋತಿ ವಿಶಾಲ. ಇದನ್ನು ಮೀರಿದ ಅದ್ಭುತ ಜ್ಯೋತಿ ಇದೆ. ಜಗತ್ತೆ ಮಾನವೀಯತೆ ಕಡೆಗೆ ಸಾಗಿದರೆ, ಅದುವೇ ವಿಶ್ವ ಜ್ಯೋತಿಗೆ ಪ್ರಮುಖ ಅಸ್ತ್ರವಾಗಲಿದೆ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ನಿಂದ ಶುಕ್ರವಾರ ನಡೆದ 31ನೇ ವರ್ಷ 11ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ, ಅವಿರಳಜ್ಞಾನಿ ಚನ್ನಬಸವಣ್ಣ ಅವರ ಸ್ಮರಣೆ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತ್ಯತೀತ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಆಗ ಜಾತಿ–ಜಾತಿಗಳ ಮಧ್ಯೆ ಜಗಳ ಉಂಟಾಗುವುದಿಲ್ಲ. ಸಂಸಾರದಲ್ಲಿ ಆದರ್ಶ ಇರಬೇಕು. ವಧು, ವರದಕ್ಷಿಣೆ ಎಂಬ ಮಾರಾಟಕ್ಕೆ ಒಳಗಾಗಬಾರದು. ಸ್ವಂತ ದುಡಿಮೆಯಿಂದ ಬದುಕಬೇಕು. ವಿಶ್ವಮಾನವ ಆಲೋಚನೆ ಬೆಳೆಸಿಕೊಳ್ಳಬೇಕು. ಆಗ ಚನ್ನಬಸವಣ್ಣಸೇರಿ ಬಸವಾದಿ ಶರಣ ಆಶಯ
ಈಡೇರಲಿದೆ’ ಎಂದರು.

ADVERTISEMENT

ಸರ್ಕಾರಿ ಕಲಾ ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್. ಗುಡ್ಡದೇಶ್ವರಪ್ಪ, ‘ಸಮ ಸಮಾಜದ ನಿರ್ಮಾಣಕ್ಕೆ ಬಸವಣ್ಣ ಅವರ ಕೊಡುಗೆ ಅಪಾರ’ ಎಂದ ಅವರು, ‘ಶ್ರೀಮಠದಲ್ಲಿ ಪ್ರತಿ ತಿಂಗಳು ನಡೆಯುತ್ತಿರುವ ಸಾಮೂಹಿಕ ಕಲ್ಯಾಣ ಮಹೋತ್ಸವ ಅತ್ಯಂತ ಪುಣ್ಯದ ಕಾರ್ಯ’ ಎಂದು ಹೇಳಿದರು.

ಎರಡು ಅಂತರ್ಜಾತಿ ವಿವಾಹ ಸೇರಿ ಒಟ್ಟು 13 ಜೋಡಿಗಳ ವಿವಾಹ ನೆರವೇರಿತು. ಕೃತಿಕಾರ ಕೆ. ಮಂಜುನಾಥ ನಾಯಕ್ ಅವರ ‘ಬಾಳಿಗೊಂದು ಬಂಗಾರದ ಮಾತು’ ಕೃತಿ ಲೋಕಾರ್ಪಣೆಯಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.