ADVERTISEMENT

ನಾನು ಭ್ರಷ್ಟನಲ್ಲ: ಆರೋಪದಿಂದ ಮುಕ್ತನಾಗುವೆ–ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 11:49 IST
Last Updated 22 ನವೆಂಬರ್ 2020, 11:49 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಚಿತ್ರದುರ್ಗ: ‘ನಾನು ಯಾವ ಭ್ರಷ್ಟಾಚಾರ ಪ್ರಕರಣದಲ್ಲೂ ಭಾಗಿಯಾಗಿಲ್ಲ. ನನ್ನ ಮೇಲೆ ಹೊರಿಸಲಾದ ಆರೋಪಗಳಿಂದ ಖಂಡಿತ ಮುಕ್ತನಾಗುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಹಿರಿಯೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಮಿಷನ್ ತನಿಖೆ ಯಾವುದೂ ಇಲ್ಲ. ಈವರೆಗೂ ಮಾಡಲಾದ ತನಿಖೆಗಳೆಲ್ಲವೂ ಮುಕ್ತಾಯವಾಗಿವೆ. ಸಚಿವನಾದಗಲೂ ಭ್ರಷ್ಟಾಚಾರ ಎಸಗಿಲ್ಲ. 30 ವರ್ಷದ ರಾಜಕೀಯ ಜೀವನದಲ್ಲಿ ಯಾವ ಆರೋಪ ಇರಲಿಲ್ಲ. ಬೆಳವಣಿಗೆ ಸಹಿಸದವರು ಆರೋಪಿಸುತ್ತಿದ್ದಾರೆ’ ಎಂದು ದೂರಿದರು.

‘ಆದಾಯಕ್ಕಿಂತ ಆಸ್ತಿ ಜಾಸ್ತಿ ಇದೆ ಎಂದು ಸಿಬಿಐಗೆ ರಾಜ್ಯದಿಂದ ಒಂದೇ ಪ್ರಕರಣ ದಾಖಲಾಗಿದೆ. ಈ ಹಿಂದೆ ದಾಳಿ ಕೂಡ ನಡೆದಿದೆ. ಈಗ ಸಮನ್ಸ್ ನೀಡಿದ್ದಾರೆ. ಕಾನೂನಿಗೆ ಗೌರವ ನೀಡುತ್ತೇನೆ. ಕಾನೂನಾತ್ಮಕವಾಗಿಯೇ ಎದುರಿಸಿ ಉತ್ತರ ನೀಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಕಾಂಗ್ರೆಸ್‌ನವರ ಹೆಗಲ ಮೇಲಿರುವ ಶಾಲು ನಾವು ಏನೆಂಬುದನ್ನು ತೋರಿಸುತ್ತದೆ. ಶಾಲು ಹಾಕಿಕೊಳ್ಳುವ ಅಧಿಕಾರ ಬೇರೆಯವರಿಗೆ ಇಲ್ಲ. ಇದೊಂದೆ ಉತ್ತರ ಸಾಕು’ ಎಂದು ‘ಕಾಂಗ್ರೆಸ್ ದೇಶ ವಿರೋಧಿ’ ಎಂಬ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಶಾಸಕರಾದ ಸತೀಶ್‌ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಪೈಪೋಟಿ ಇರುವ ವಿಚಾರ ನನಗೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.