ADVERTISEMENT

ನಾಯಕನಹಟ್ಟಿ | ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:10 IST
Last Updated 1 ಮಾರ್ಚ್ 2026, 6:10 IST
ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಆವರಣದಲ್ಲಿ ಶನಿವಾರ ಪ್ರಾತ್ಯಕ್ಷಿಯಲ್ಲಿ ತೊಡಗಿರುವ ಪ್ರಾಧ್ಯಾಪಕರು
ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಆವರಣದಲ್ಲಿ ಶನಿವಾರ ಪ್ರಾತ್ಯಕ್ಷಿಯಲ್ಲಿ ತೊಡಗಿರುವ ಪ್ರಾಧ್ಯಾಪಕರು   

ನಾಯಕನಹಟ್ಟಿ: ವಿಜ್ಞಾನದ ಹಲವು ಪರಿಕಲ್ಪನೆಗಳ ಪ್ರದರ್ಶನ, ಪ್ರಯೋಗ, ಪ್ರಾತ್ಯಕ್ಷಿಕೆ, ಸಂಶೋಧನಾ ತರಬೇತಿಗಳ ಮೂಲಕ ದೇಶದ ಗಮನ ಸೆಳೆದಿರುವ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಶನಿವಾರ 3500 ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಿದರು.

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಮೂಲವಿಜ್ಞಾನದ ಪ್ರಯೋಗಗಳ ಪ್ರಾತ್ಯಕ್ಷಿಕೆ ಮತ್ತು ವಸ್ತು ಪ್ರದಶನ ಹಮ್ಮಿಕೊಳ್ಳಲಾಗಿತ್ತು.

ಶನಿವಾರವಾರ ಬೆಳಿಗ್ಗೆ 9ಗಂಟೆಗೆ ಆರಂಭವಾದ ಕಾರ್ಯಕ್ರಮಕ್ಕೆ ನಾಯಕನಹಟ್ಟಿ ಪಟ್ಟಣ ಸೇರಿದಂತೆ ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ, ಬಳ್ಳಾರಿ, ಜಗಳೂರು ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದರು. ವಿಜ್ಞಾನದ ಹಲವು ಪ್ರಯೋಗಗಳು, ಪ್ರಾತ್ಯಕ್ಷಿಕೆಗಳನ್ನು ಕಂಡು ವಿದ್ಯಾರ್ಥಿಗಳು ಪುಳಕಿರಾದರು. ಸಂಸ್ಥೆಯ ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಖಗೋಳಶಾಸ್ತ್ರ ವಿಷಯಗಳ ಬಗ್ಗೆ ನೀಡುತ್ತಿದ್ದ ವಿವರಣೆಗಳನ್ನು ನೂರಾರು ವಿದ್ಯಾರ್ಥಿಗಳು ಕೂತುಹಲದಿಂದ ಆಲಿಸಿದರು. 

ADVERTISEMENT

ರಾಕೆಟ್ ಉಡಾವಣೆ ವೀಕ್ಷಿಸಿದ ಜಿ.ಪಂ.ಸಿಇಒ ಡಾ.ಆಕಾಶ್; ಬೆಂಗಳೂರಿನ ಏರೋನಾಟಿಕಲ್ ಇಂಜಿನಿಯರಿಂಗ್ ತಂಡವು ವಿಮಾನಗಳ ರಚನೆ, ಹಾರಾಟದ ತಂತ್ರಜ್ಞಾನವನ್ನು ತಾವೇ ತಯಾರಿಸಿ ಚಿಕ್ಕ ವಿಮಾನಗಳ ಮಾದರಿಯ ಮೂಲಕ ಪರಿಚಯಿಸಿದರು. ಜೊತೆಗೆ ಸಣ್ಣ ಪ್ರಮಾಣದ ವಿಮಾನದ ಹಾರಾಟವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ರಾಕೆಟ್ ಉಡಾವಣೆಯ ತತ್ವವನ್ನು ಪರಿಚಯಿಸಿ, ಮಾಡೆಲ್ ರಾಕೆಟ್ ಉಡಾವಣೆ ನಡೆಸಿದರು. ಇದೇವೇಳೆ ಸ್ಥಳಕ್ಕಾಗಮಿಸಿದ ಜಿ.ಪಂ. ಸಿಇಒ ಆಕಾಶ್ ವಿದ್ಯಾರ್ಥಿಗಳೊಂದಿಗೆ ಕೂತುಹಲದಿಂದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.

‘ಈ ವರ್ಷ ವಿಜ್ಞಾನದಲ್ಲಿ ಮಹಿಳೆಯರು, ವೇಗವರ್ಧನೆಯಲ್ಲಿ ವಿಕಸಿತ ಭಾರತ ಎಂಬ ಘೋಷವಾಕ್ಯದ ಜೊತೆಗೆ ವಿಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯಗಳ ಪ್ರಯೋಗ, ಪ್ರಾತ್ಯಕ್ಷಿಕೆ, ಚಿತ್ರಕಲೆ ಸ್ಪರ್ಧೆ, ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಯಶಸ್ವಿಯಾಗಿದ್ದೇವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಮುಖ್ಯಸ್ಥ ಪ್ರೊ.ಬಿ. ಸುಬ್ಬಾರೆಡ್ಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಐಐಎಸ್ಸಿ ಕೌಶಾಲ್ಯಭಿವೃದ್ಧಿ ಕೇಂದ್ರದ ನಿವೃತ್ತ ಸಂಚಾಲಕ ಪ್ರೊ.ಬಿ.ಎನ್. ರಘುನಂದನ್, ಪ್ರೊ. ವೆಂಕಟರಮಣರೆಡ್ಡಿ, ಪ್ರೊ. ಮೋಹನ್‌ಕುಮಾರ್, ಪ್ರೊ. ರಾಘವೇಂದ್ರ, ಪ್ರೊ. ಅರವಿಂದ್, ಪ್ರೊ.ಕಿ ಶೋರ್, ಪ್ರೊ. ಅಮಿತ್, ಇಂಜಿನಿಯರ್ ಆರ್. ಹೇಮಂತ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಐಐಎಸಿ ಸಿಬ್ಬಂದಿ ಇದ್ದರು.

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಆವರಣದಲ್ಲಿ ಶನಿವಾರ ಪ್ರಾತ್ಯಕ್ಷಿಯಲ್ಲಿ ತೊಡಗಿರುವ ಪ್ರಾಧ್ಯಾಪಕರು
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಆವರಣದಲ್ಲಿ ಶನಿವಾರ ಜಿ.ಪಂ. ಸಿಇಒ ಆಕಾಶ್ ವಿಜ್ಞಾನ ಮಾದರಿಯನ್ನು ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.