ADVERTISEMENT

ಹೊಸದುರ್ಗ: ಸ್ವಯಂ ಚಾಲಿತ ಸ್ಯಾನಿಟೈಸರ್‌ ಯಂತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 14:20 IST
Last Updated 8 ಜುಲೈ 2020, 14:20 IST
ಹೊಸದುರ್ಗದ ಪುರಸಭೆಯಲ್ಲಿ ಬುಧವಾರ ಸ್ವಯಂ ಚಾಲಿತ ಸ್ಯಾನಿಟೈಸರ್‌ ಯಂತ್ರವನ್ನು ಅಳವಡಿಸಲಾಗಿದೆ
ಹೊಸದುರ್ಗದ ಪುರಸಭೆಯಲ್ಲಿ ಬುಧವಾರ ಸ್ವಯಂ ಚಾಲಿತ ಸ್ಯಾನಿಟೈಸರ್‌ ಯಂತ್ರವನ್ನು ಅಳವಡಿಸಲಾಗಿದೆ   

ಹೊಸದುರ್ಗ: ಇಲ್ಲಿನ ಪುರಸಭೆಯಲ್ಲಿ ಬುಧವಾರ ಸ್ವಯಂ ಚಾಲಿತ ಸ್ಯಾನಿಟೈಸರ್‌ ಯಂತ್ರವನ್ನು ಅಳವಡಿಸಲಾಗಿದೆ.

ಪುರಸಭೆಗೆ ಪ್ರತಿದಿನವೂ ವಿವಿಧ ಕೆಲಸ, ಕಾರ್ಯಕ್ಕೆ ನೂರಾರು ಸಾರ್ವಜನಿಕರು ಬರುತ್ತಾರೆ. ಹಾಗಾಗಿ ಕೊರೊನಾ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಮುಖ್ಯಕಟ್ಟಡ ಹಾಗೂ ಆರೋಗ್ಯ ಶಾಖೆ ಕಚೇರಿ ಮುಂಭಾಗದಲ್ಲಿ 2 ಯಂತ್ರಗಳನ್ನು ಅಳವಡಿಸಲಾಗಿದೆ.

ಕಾರ್ಯಾಲಯಕ್ಕೆ ಬರುವ ಜನರು ಈ ಸೋಂಕು ನಿವಾರಣೆ ಯಂತ್ರದ ಕೆಳಗೆ ಕೈಯಿಡುತ್ತಿದಂತೆ ಸ್ವಯಂ ಚಾಲಿತವಾಗಿ ಸ್ಯಾನಿಟೈಸೇಷನ್‌ ಆಗುತ್ತದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಇಲ್ಲಿ ಸ್ಯಾನಿಟೈಸರ್ ಮಾಡಿಕೊಂಡ ನಂತರವೇ ಪರಸ್ಪರ ಅಂತರ ಕಾಪಾಡಿಕೊಂಡುಕಚೇರಿ ಒಳಗೆ ಪ್ರವೇಶಿಸುವಂತೆ ಸೂಚಿಸಲಾಗಿದೆ.

ADVERTISEMENT

ಮಾಸ್ಕ್ ಧರಿಸದಿದ್ದರೆ ₹ 100 ದಂಡ ವಿಧಿಸಲಾಗುವುದು. ಯಾವುದೇ ವ್ಯಕ್ತಿ, ವ್ಯಾಪಾರಿಗಳು ಪದೇ, ಪದೇ ನಿಯಮ ಉಲ್ಲಂಘಿಸಿದರೆ ದೂರು ದಾಖಲಿಸಲಾಗುವುದು ಎಂದು ಪುರಸಭೆ ಪರಿಸರ ಎಂಜಿನಿಯರ್‌ ಜಿ. ವಿ. ತಿಮ್ಮರಾಜು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.