ADVERTISEMENT

ಚಳ್ಳಕೆರೆ | ಕಬ್ಬಿಣದ ಅದಿರು ಸಾಗಣೆಗೆ ವಿರೋಧ

ವಿವಿಧ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:53 IST
Last Updated 18 ಜುಲೈ 2025, 6:53 IST
ಚಳ್ಳಕೆರೆ ನಗರದ ಪಾವಗಡ ರಸ್ತೆ ಬಳಿ ರೈಲ್ವೆ ನಿಲ್ದಾಣದ ಆವರಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಸಂಸದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು 
ಚಳ್ಳಕೆರೆ ನಗರದ ಪಾವಗಡ ರಸ್ತೆ ಬಳಿ ರೈಲ್ವೆ ನಿಲ್ದಾಣದ ಆವರಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಸಂಸದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು    

ಚಳ್ಳಕೆರೆ: ಇಲ್ಲಿನ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಬ್ಬಿಣದ ಅದಿರು ಸಾಗಣೆ ವಿರೋಧಿಸಿ ತಾಲ್ಲೂಕು ರೈತ ಸಂಘದ ಹಸಿರು ಸೇನೆ, ನಾಗರಿಕರ ಹಿತರಕ್ಷಣಾ ವೇದಿಕೆ, ಕರವೇ, ಬಿಜೆಪಿ ತಾಲ್ಲೂಕು ಮತ್ತು ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಪಾವಗಡ ರಸ್ತೆ ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ಅದಿರು ಸಾಗಣೆ ಪರಿಣಾಮ ಸಮೀಪದ ಎರಡು ಕರೆಯಲ್ಲಿನ ನೀರು ಕಲುಷಿತಗೊಂಡಿದೆ. ಜನವಸತಿ, ಪ್ರದೇಶ, ಶಾಲೆ– ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿರ ಆರೋಗ್ಯಕ್ಕೂ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ, ರೈಲ್ವೆ ನಿಲ್ದಾಣದಲ್ಲಿ ಅದಿರು ಲೋಡಿಂಗ್, ಅನ್‍ಲೋಡಿಂಗ್‍ಗೆ ನಿಂತಿರುವ ವಾಹನಗಳನ್ನು ಖಾಲಿ ಮಾಡಿಸಬೇಕು. ಸಾಗಣೆಯ ಯಾವುದೇ ಪ್ರಕ್ರಿಯೆ ನಡೆಸಬಾರದು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‘ಅಗತ್ಯವಿದ್ದರೆ ನಗರದ ಹೊರಭಾಗದಲ್ಲಿ ಪರ್ಯಾಯವಾಗಿ ಪ್ರತ್ಯೇಕ ಲೈನ್ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಿರುವಂತೆ ಅದಿರು ಸಾಗಣೆ ಆರಂಭಿಸಲಿ’ ಎಂದು ಹೇಳಿದರು.

ADVERTISEMENT

ರೈತ ಸಂಘದ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ತಾಲ್ಲೂಕು ಮಂಡಲದ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಸೋಮಶೇಖರ್ ಮಂಡಿಮಠ, ಮುಖಂಡ ಬಾಳೆಕಾಯಿ ರಾಮದಾಸ್, ಕಾಲುವೆಹಳ್ಳಿ ಜಯಪಾಲಯ್ಯ ಮಾತನಾಡಿದರು.

ಮುಖಂಡ ಬಿ.ಎಸ್.ಶಿವಪುತ್ರಪ್ಪ, ದಿನೇಶ್‍ರೆಡ್ಡಿ, ಎಬಿವಿಪಿ ಮುಖಂಡ ಮಂಜುನಾಥ್, ಏಜೆಂಟ್ ಪಿ.ಬೋರಯ್ಯ, ಗಿರಿಜಮ್ಮ, ಗೀತಮ್ಮ, ಭರಮಯ್ಯರ ಪಾಪಣ್ಣ, ಬೋರಮ್ಮ, ಗೌರಮ್ಮ, ಮೇಘನಾ, ಪಾಪಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.