ADVERTISEMENT

ಹಿರಿಯೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 8:32 IST
Last Updated 16 ಡಿಸೆಂಬರ್ 2025, 8:32 IST
ವಿವಿಧ ಬೇಡಿಕೆ ಈಡೇರಿಕೆಗಾಗಿ ಹಿರಿಯೂರಿನಲ್ಲಿ ಸೋಮವಾರ ದಸ್ತಾವೇಜು ಬರಹಗಾರರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗಾಗಿ ಹಿರಿಯೂರಿನಲ್ಲಿ ಸೋಮವಾರ ದಸ್ತಾವೇಜು ಬರಹಗಾರರು ಪ್ರತಿಭಟನೆ ನಡೆಸಿದರು   

ಹಿರಿಯೂರು: ನೆರೆಯ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲಿಯೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

‘ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್, ನೋಂದಣಿ ಆಗುವ ಎಲ್ಲಾ ದಸ್ತಾವೇಜುಗಳಿಗೆ ಪತ್ರಬರಹಗಾರರ ಅಥವಾ ವಕೀಲರ ಬಿಕ್ಕಲಂ (ದಸ್ತಾವೇಜುದಾರರ ಸಹಿ) ಕಡ್ಡಾಯಗೊಳಿಸಬೇಕು. ಪತ್ರ ಬರಹಗಾರರಿಗೆ ಸರ್ಕಾರದಿಂದ ಏಕರೂಪದ ಗುರುತಿನ ಪತ್ರ ವಿತರಿಸಬೇಕು ಎಂಬ ಬೇಡಿಕೆಗಳನ್ನು ಅಂಗೀಕರಿಸಬೇಕು’ ಎಂದು ಸಂಘದ ಅಧ್ಯಕ್ಷ ಜಿ. ದೇವರಾಜು ಒತ್ತಾಯಿಸಿದರು.

ತಹಶೀಲ್ದಾರ್, ಉಪನೋಂದಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ADVERTISEMENT

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಜಿ.ಎನ್. ವೀರೇಶ್, ಖಜಾಂಚಿ ಜಿ. ಕುಮಾರಸ್ವಾಮಿ, ಬಿ.ಆರ್. ಜಗದೀಶ್, ಬಿ.ಎಂ.ಶಿವಣ್ಣ, ಎ. ನಾಗರಾಜ, ಬಿ.ಸುಧಾಕರ್, ಅಬ್ದುಲ್ ರಹೀಂ, ಮಲ್ಲಾಚಾರಪ್ಪ, ಎಸ್.ಆರ್. ಉಮೇಶ್, ಬಿ.ರಾಜಶೇಖರ್, ಎಚ್.ಶಶಿಧರ, ಎ.ರಮೇಶ್, ಸೆಲ್ವರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.