
ಹೊಸದುರ್ಗ: ತಾಲ್ಲೂಕಿನ ಮತ್ತೋಡು ಹೋಬಳಿಯ ಗುಡ್ಡದನೇರಲಕೆರೆ ಗ್ರಾಮದಲ್ಲಿ ಹಾಗೂ ಬೆಟ್ಟದಲ್ಲಿ ನೆಲೆಸಿರುವ ದಶರಥರಾಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಾರ್ತಿಕ ಮಹೋತ್ಸವ ಸೋಮವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ದಶರಥರಾಮೇಶ್ವರ ಸ್ವಾಮಿಗೆ ಬೆಳಿಗ್ಗೆ 5 ಗಂಟೆಗೆ ರುದ್ರಾಭಿಷೇಕ, 9ಕ್ಕೆ ಅಷ್ಟೋತ್ತರ ಪೂಜೆ, ಮಧ್ಯಾಹ್ನ 3 ಗಂಟೆಗೆ ಪಂಚಾಮೃತ ಅಭಿಷೇಕ, ಸಂಜೆ 5 ಗಂಟೆಗೆ ಬಿಲ್ವಾರ್ಚನೆ ನಡೆಯಿತು. ನಂತರ 7.30ಕ್ಕೆ ಸಾಷ್ಟಾಂಗ ಪೂಜೆ ಹಾಗೂ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಬಾಳೆದಿಂಡಿನ ಸಹಾಯದಿಂದ ಮಂಟಪದ ರೀತಿಯಲ್ಲಿ ಕದಳಿ ನಿರ್ಮಿಸಿ, ಅದಕ್ಕೆ ವಿಶೇಷ ಅಲಂಕಾರ ಮತ್ತು ಪೂಜೆ ನೇರವೇರಿಸಿಲಾಯಿತು. ಉತ್ಸವ ಸ್ವಾಮಿ ಸನ್ನಿಧಾನದಲ್ಲಿ ದೀಪ ಬೆಳಗಿಸಲಾಯಿತು.
ದಾವಣಗೆರೆ, ಬೆಂಗಳೂರು, ತುಮಕೂರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ಧದರು. ಒಂದು ಲಕ್ಷದ ಒಂದು ದೀಪ ಬೆಳಗಿಸಲಾಯಿತು. ಬೆಟ್ಟದಲ್ಲಿಯೂ ಸಹ ದೀಪ ಹಚ್ಚಿ ಬೆಳಗಿಸಲಾಯಿತು. ದೀಪೋತ್ಸವದ ನಂತರ ಅನ್ನಸಂತರ್ಪಣೆ ನಡೆಯಿತು.
ಭಕ್ತರು ದೀಪ ಬೆಳಗಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಸಾವಿರಾರು ಭಕ್ತರು ಆಗಮಿಸಿ, ಸ್ವಾಮಿಯ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.