ADVERTISEMENT

ಕೋಡಿಬಿದ್ದ ಹುಲೇಮಳಲಿ ಕೆರೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 2:39 IST
Last Updated 5 ಸೆಪ್ಟೆಂಬರ್ 2022, 2:39 IST
ಚಿಕ್ಕಜಾಜೂರು ಸಮೀಪದ ಹುಲೇಮಳಲಿ ಗ್ರಾಮದ ಕೆರೆ ಕೋಡಿ ಬಿದ್ದಿದೆ
ಚಿಕ್ಕಜಾಜೂರು ಸಮೀಪದ ಹುಲೇಮಳಲಿ ಗ್ರಾಮದ ಕೆರೆ ಕೋಡಿ ಬಿದ್ದಿದೆ   

ಚಿಕ್ಕಜಾಜೂರು: ಸಮೀಪದ ಹುಲೇಮಳಲಿ ಗ್ರಾಮದ ಕೆರೆ 15 ವರ್ಷಗಳ ನಂತರ ಕೆರೆ ಕೋಡಿ ಬಿದ್ದಿದೆ.ಹುಲೇಮಳಲಿ ಹಾಗೂ ಶಿವಪುರ ಗ್ರಾಮಸ್ಥರು ತಂಡೋಪತಂಡವಾಗಿ ಬಂದು, ಕೋಡಿ ನೀರನ್ನು ವೀಕ್ಷಿಸಿದರು.

ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿ ಬಿದ್ದಿದೆ. ಇದರಿಂದಾಗಿ ಹುಲೇಮಳಲಿ ಹಾಗೂ ಶಿವಪುರ ಎರಡೂ ಗ್ರಾಮಗಳ ವ್ಯಾಪ್ತಿಯ ತೋಟಗಳ ಕೊಳವೆಬಾವಿಗಳಿಗೆ ಅನುಕೂಲ ಆಗಲಿದೆ. ಹಿಂದೆ ಕೆರೆಗೆ ನೀರು ಅಲ್ಪ ಪ್ರಮಾಣದಲ್ಲಿ ಬಂದು, ಬೇಸಿಗೆ ವೇಳೆಗೆ ಕೆರೆ ಬರಿದಾಗುತ್ತಿತ್ತು. ತೋಟಗಳ ಕೊಳವೆಬಾವಿಗಳು ಡಿಸೆಂಬರ್‌ ವೇಳೆಗೆ ಖಾಲಿಯಾಗುತ್ತಿದ್ದವು. ನೀರು ಬಂದಿರುವುದರಿಂದ ಕೊಳವೆಬಾವಿಗಳಲ್ಲಿನ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT