ADVERTISEMENT

ಮೊಳಕಾಲ್ಮುರು: ಕುರಿ ಉಣ್ಣೆ ಕಂಬಳಿಗೆ ರಾಜ್ಯ ಪ್ರಶಸ್ತಿ

ಶಿವಲಿಂಗ, ನಂದಿ ಮೂಡಿಸಿದ ಕೊಂಡ್ಲಹಳ್ಳಿಯ ನೇಕಾರ ಬಜ್ಜಪ್ಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:48 IST
Last Updated 4 ಆಗಸ್ಟ್ 2025, 6:48 IST
<div class="paragraphs"><p>` ಪಾತ್ರವಾಗಿರುವ ನಂದಿ, ಶಿವಲಿಂಗ ಚಿತ್ರ ಉಳ್ಳ ಉಣ್ಣೆ ಕೈಮಗ್ಗ ಕಂಬಳಿ ಜತೆ ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯ ನೇಕಾರ ಬಜ್ಜಪ್ಪ ದಂಪತಿ</p></div>

` ಪಾತ್ರವಾಗಿರುವ ನಂದಿ, ಶಿವಲಿಂಗ ಚಿತ್ರ ಉಳ್ಳ ಉಣ್ಣೆ ಕೈಮಗ್ಗ ಕಂಬಳಿ ಜತೆ ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯ ನೇಕಾರ ಬಜ್ಜಪ್ಪ ದಂಪತಿ

   

ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯ ಕುರಿ ಉಣ್ಣೆ ಕಂಬಳಿ ನೇಕಾರ ಕೆ.ಎಂ. ಬಜ್ಜಪ್ಪ ನೇಯ್ಗೆ ಮಾಡಿರುವ ಕಂಬಳಿಗೆ 2024-25ನೇ ಸಾಲಿನ ರಾಜ್ಯಮಟ್ಟದ ಪ್ರಥಮ ಸ್ಥಾನ ಲಭಿಸಿದೆ.

ಕಂಬಳಿಯಲ್ಲಿ ಶಿವಲಿಂಗ ಮತ್ತು ನಂದಿಯನ್ನು ಹೊಂದಿದೆ. ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರತಿವರ್ಷ ಕೈಮಗ್ಗ ದಿನಾಚರಣೆ ಅಂಗವಾಗಿ ಹಲವು ವರ್ಷಗಳಿಂದ ಉತ್ತಮ ನೇಕಾರರಿಗೆ ಪ್ರಶಸ್ತಿ ನೀಡುವುದನ್ನು ನಡೆಸಿಕೊಂಡು ಬಂದಿದೆ.

ADVERTISEMENT

ಜಿಲ್ಲೆಯಲ್ಲಿ ಉಣ್ಣೆ ಕಂಬಳಿ ನೇಯ್ಗೆಯಲ್ಲಿ ಕೊಂಡ್ಲಹಳ್ಳಿಯು ಪ್ರಮುಖವಾಗಿ ಗುರುತಿಸಿಕೊಂಡಿದೆ. ನೂರಾರು ನೇಕಾರರು ಇಲ್ಲಿ ಕಂಬಳಿ ನೇಯ್ಗೆ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮದ ನೇಕಾರರು ವಿವಿಧ ರೀತಿಯ ಕಂಬಳಿ ನೇಯ್ಗೆ ಮಾಡುವ ಮೂಲಕ ರಾಷ್ಟ್ರ, ರಾಜ್ಯ, ಜಿಲ್ಲಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಲ್ಲಿನ ಕಂಬಳಿಗಳಿಗೆ ಮಲೆನಾಡಿನ ಭಾಗದಲ್ಲಿ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅಪ್ಪಟ ಕುರಿ ಉಣ್ಣೆ ಬಳಸಿ ನೇಯ್ಗೆ ಮಾಡುವ ಕಾರಣ ಧೀರ್ಘ ಬಾಳಿಕೆಗೆ ಖ್ಯಾತಿಯಾಗಿದೆ. ಜತೆಗೆ ಶುಭ ಕಾರ್ಯಗಳಿಗೆ ಈ ಕಂಬಳಿಗಳನ್ನು ಹೆಚ್ಚು ಬಳಸುತ್ತಾರೆ.

ಮೂರು ಲಾಳಿ, 5 ಕಂಡಿಕೆ ಬಳಸಿ 30 ದಿನಗಳ ಕಾಲ ಬಜ್ಜಪ್ಪ ದಂಪತಿ ಕಂಬಳಿ ನೇಯ್ಗೆ ಕಾರ್ಯ ಮಾಡಿದ್ದಾರೆ, ಚಿತ್ರಕಲಾ ಶಿಕ್ಷಕ ಯು.ಆರ್.‌ ರಮೇಶ್‌ ಸಹಕಾರ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಇಂತಹ ಕಂಬಳಿಗೆ ₹ 17,000ಕ್ಕೂ ಹೆಚ್ಚಿನ ಬೆಲೆಯಿದೆ. ಬಜ್ಜಪ್ಪ ದಂಪತಿ 4 ದಶಕಗಳಿಂದ ಕಂಬಳಿ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆ. 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.