ಮೊಳಕಾಲ್ಮುರು: ತಾಲ್ಲೂಕಿನ ಪ್ರಾಗೈತಿಹಾಸಿಕ ಅಶೋಕ ಸಿದ್ದಾಪುರ ಬಳಿಯ ಸಾಮ್ರಾಟ್ ಅಶೋಕನ ಶಾಸನ ಬಳಿ ಬುಧವಾರ ಚಿರತೆಯೊಂದು ಪ್ರತ್ಯಕ್ಷವಾಗಿದೆ.
ಶಾಸನದ ಪಕ್ಕದಲ್ಲಿರುವ ಕಲ್ಲಿನ ಬಂಡೆಗಳ ಮೇಲೆ ಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯವನ್ನು ಶಾಸನ ಮೇಲ್ವಿಚಾರಕ ಕೆಲಸ ಮಾಡುವ ಮಂಜುನಾಥ್ ವಿಡಿಯೊ ಮಾಡಿದ್ದಾರೆ.
ಹಲವು ಬಾರಿ ಈ ಚಿರತೆ ಇಲ್ಲಿನ ಬೆಟ್ಟಗಳಲ್ಲಿ ಕಾಣಿಸಿಕೊಂಡಿದೆ. ಕುರಿ, ಮೇಕೆ, ಜಾನುವಾರು ಮೇಯಿಸಲು ಇಲ್ಲಿಗೆ ಸಾಕಣೆ ಮಾಡುವವರು ಹೊಡೆದುಕೊಂಡು ಬರುತ್ತಾರೆ. ಚಿರತೆ ದಾಳಿಗೆ ಹಲವು ಪ್ರಾಣಿಗಳು ಬಲಿಯಾಗಿದ್ದು, ಕೆಲವು ಗಾಯಗೊಂಡಿವೆ. ಸ್ಮಾರಕ ವೀಕ್ಷಣೆಗೆ ಶಾಲಾ ಮಕ್ಕಳು, ಇತಿಹಾಸ ಪ್ರೇಮಿಗಳು, ವಿದೇಶಿಗರು ಸಹ ಬಂದು ಹೋಗುತ್ತಾರೆ. ಹಾಗಾಗಿ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.