ಮೊಳಕಾಲ್ಮುರು: ಎಲ್ಲಾ ಜಾತಿಗಳಿಗೆ ಅನ್ವಯವಾಗುವ ರೀತಿಯಲ್ಲಿ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಮುದಾಯವನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಮುಂದುವರಿದ ಜನಾಂಗಗಳು ಮುಂದಾಗಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು.
ತಾಲ್ಲೂಕಿನ ರಾಂಪುರದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಇಂತಹ ಜನಮುಖಿ ಕಾರ್ಯಕ್ಕೆ ಅಗತ್ಯ ಸಹಾಯವನ್ನು ನಾನು ವೈಯಕ್ತಿಕವಾಗಿ ಭರಿಸುತ್ತೇನೆ. ಶಿಕ್ಷಣದಿಂದ ಮಾತ್ರ ಹಿಂದುಳಿದ ಪ್ರದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ವೀರಶೈವ ಸಮಾಜದ ಮುಖಂಡ ಜಿ.ಸಿ. ನಾಗರಾಜ್ ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಕ್ಕಳಲ್ಲಿ ಸ್ಫೂರ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಟಿ.ನಾಗಿರೆಡ್ಡಿ, ಸಮಾಜದ ಹಿರಿಯ ಮುಖಂಡರಾದ ಆರ್.ಜಿ. ಜಯಕುಮಾರ್, ಬಿ.ಪಿ.ಜಯಪ್ರಕಾಶ ರೆಡ್ಡಿ, ಬಿ.ಟಿ.ಮಂಜುನಾಥ್, ಸಮಾಜದ ಗುರು ರೇಣುಕಾಸ್ವಾಮಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿಯ 28 ಮತ್ತು ಪಿಯುಸಿಯಲ್ಲಿ 27 ವಿದ್ಯಾರ್ಥಿಗಳು ಸೇರಿ ಒಟ್ಟು 55 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಮಾಜದ ಮುಖಂಡರಾದ ಆರ್‌ಟಿಒ ಶರಣಪ್ಪ, ಎಂ.ಕೆ.ಮೂರ್ತಿ, ಪಿ.ಕೆ.ರವಿಶಂಕರ್, ಬಳೆ ಸೋಮಶೇಖರ್, ಗಡ್ಡೆ ತಿಪ್ಪಣ್ಣ, ಜಡೇರ್ ನಾಗರಾಜ್, ಕೆ.ಆರ್.ಬಸವರಾಜ್, ಮಲ್ಲಿಕಾರ್ಜುನ್, ಭರತ್ ಕುಮಾರ್, ರಮೇಶ್ ಹೂಗಾರ್, ಜಿ.ಬಸವರಾಜ್, ಸ್ವಾತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.