ADVERTISEMENT

ಲಿಂಗಾಯತ, ಮುಸ್ಲಿಂ ಧರ್ಮದ ತತ್ವಗಳು ಭಿನ್ನ, ಹೋಲಿಕೆ ಸಲ್ಲ: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 0:18 IST
Last Updated 8 ಸೆಪ್ಟೆಂಬರ್ 2025, 0:18 IST
   

ಚಿತ್ರದುರ್ಗ: ‘ಲಿಂಗಾಯತ, ಮುಸ್ಲಿಂ ಧರ್ಮದ ತತ್ವಗಳು ಭಿನ್ನವಾದುವು. ಪರಸ್ಪರ ಹೋಲಿಕೆ ತಪ್ಪು. ಲಿಂಗಾಯತರದ್ದು ಅಹಿಂಸಾ ತತ್ವ. ಅವರಲ್ಲಿ ಗೋಮಾಂಸ ಸೇವನೆ ಇಲ್ಲ’ ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ‘ಬಸವ ಸಂಸ್ಕೃತಿ ಯಾತ್ರೆ ವೇಳೆ ಸ್ವಾಮೀಜಿಯೊಬ್ಬರು ಲಿಂಗಾಯತ, ಮುಸ್ಲಿಂ ಧರ್ಮ ಒಂದೇ ಎಂಬಂತೆ ಮಾತನಾಡಿದ್ದಾರೆ. ಆ ಮೂಲಕ ಜನರಲ್ಲಿ ನಾಸ್ತಿಕವಾದ ಬಿತ್ತಲು ಹೊರಟಿರುವುದು ಸರಿಯಲ್ಲ’ ಎಂದರು.

‘ಬಸವ ಸಂಸ್ಕೃತಿ ಯಾತ್ರೆ ಹಿಂದಿನ ತಂತ್ರ ಬೇರೆಯೇ ಇದೆ. ಹಾಗಂತ ಅದಕ್ಕೆ ನಮ್ಮ ವಿರೋಧ ಇಲ್ಲ. ಬಸವಣ್ಣ ಸಾಕಾರ, ನಿರಾಕಾರ ತತ್ವಗಳೆರಡನ್ನೂ ಒಪ್ಪಿಕೊಂಡವರು. ಮೊದಲಿನಿಂದ ಹಿಂದೂಗಳ ಜೊತೆಗಿದ್ದದ್ದು ಲಿಂಗಾಯತರು. ಹೀಗಾಗಿ ನಾವೆಲ್ಲರೂ ಹಿಂದೂಗಳೇ. ಪಂಚಮಸಾಲಿ ದೊಡ್ಡ ಸಮಾಜ. ಅದರ ದುರ್ಬಳಕೆ ಸಲ್ಲದು’ ಎಂದರು.   

ADVERTISEMENT

‘ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿದವರ ಕುರಿತೂ ತನಿಖೆ ಆಗಬೇಕು. ಆ ಕಾರಣಕ್ಕೆ ಮಠಾಧೀಶರ ನಿಯೋಗದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆವು. ನಾವು ಎನ್‌ಐಎ ತನಿಖೆಗೆ ಆಗ್ರಹಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.