ADVERTISEMENT

ಲಾರಿ ಪಲ್ಟಿ: ಕೋಳಿ ಹೊತ್ತೊಯ್ದ ಜನರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 16:50 IST
Last Updated 24 ಜನವರಿ 2021, 16:50 IST
ಹೊಳಲ್ಕೆರೆ ತಾಲ್ಲೂಕಿನ ಹನುಮಂತದೇವರ ಕಣಿವೆಯಲ್ಲಿ ಕೋಳಿ ಸಾಗಿಸುತ್ತಿದ್ದ ಲಾರಿ ಭಾನುವಾರ ಬೆಳಿಗ್ಗೆ ಪಲ್ಟಿ ಹೊಡೆದಿದ್ದು, ಕೋಳಿ ಖಾಲಿಯಾಗಿರುವುದು
ಹೊಳಲ್ಕೆರೆ ತಾಲ್ಲೂಕಿನ ಹನುಮಂತದೇವರ ಕಣಿವೆಯಲ್ಲಿ ಕೋಳಿ ಸಾಗಿಸುತ್ತಿದ್ದ ಲಾರಿ ಭಾನುವಾರ ಬೆಳಿಗ್ಗೆ ಪಲ್ಟಿ ಹೊಡೆದಿದ್ದು, ಕೋಳಿ ಖಾಲಿಯಾಗಿರುವುದು   

ಹೊಳಲ್ಕೆರೆ: ಕೋಳಿಗಳನ್ನು ತುಂಬಿದ್ದ ಲಾರಿಯೊಂದು ತಾಲ್ಲೂಕಿನ ಹನುಮಂತ ದೇವರ ಕಣಿವೆಯಲ್ಲಿ ಭಾನುವಾರ ಪಲ್ಟಿ ಹೊಡೆದಿದ್ದು ಕೋಳಿಗಳು ಚೆಲ್ಲಾಪಿಲ್ಲಿಯಾದವು. ಇದನ್ನು ಕಂಡ ಜನರು ಕೋಳಿಗಳನ್ನು ಹೊತ್ತೊಯ್ದರು.

ಹೊಸಪೇಟೆಯಿಂದ ಚಿಕ್ಕಮಗಳೂರಿಗೆ ಕೋಳಿ ಸಾಗಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ-13ರ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಬೆಳಿಗ್ಗೆ 6ರ ಸಮಯದಲ್ಲಿ ಮಗುಚಿ ಬಿದ್ದಿದೆ. ಕೋಳಿಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಕಂಡ ಸುತ್ತಲಿನ ಗ್ರಾಮದ ಜನರು ಕೋಳಿಗಳನ್ನು ಮನೆಗೆ ತೆಗೆದುಕೊಂಡು ಹೋದರು. ಕೆಲವರು ಬಾಕ್ಸ್ ಸಮೇತ ಹತ್ತಿಪ್ಪತ್ತು ಕೋಳಿ ಸಾಗಿಸಿದರು.

ಲಾರಿಯ ಚಾಲಕ ಹಾಗೂ ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜನರು ಕೋಳಿ ಸಾಗಿಸುತ್ತಿದ್ದರೂ ಅವರನ್ನು ತಡೆಯಲಾರದೆ ಮೂಕಪ್ರೇಕ್ಷಕರಾಗಿ ಕುಳಿತಿದ್ದರು. ಭಾನುವಾರವಾಗಿದ್ದರಿಂದ ಉಚಿತ ಬಾಡೂಟ ಸಿಕ್ಕಿತು ಎಂದು ಕೋಳಿ ಸಿಕ್ಕವರು ಖುಷಿಪಟ್ಟರೆ, ಕೋಳಿ ಸಿಗದವರು ನಿರಾಸೆಗೊಂಡರು. ಲಾರಿಯಲ್ಲಿ ₹ 1.5 ಲಕ್ಷ ಮೌಲ್ಯದ ಕೋಳಿಗಳಿದ್ದವು. ಜನರು ಎಲ್ಲವನ್ನೂ ದೋಚಿದ್ದಾರೆ ಎಂದು ಚಾಲಕ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.