ADVERTISEMENT

ಚಳ್ಳಕೆರೆ ಸಮೀಪ ಲಾರಿ-ಟ್ಯಾಂಕರ್ ಡಿಕ್ಕಿ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 3:49 IST
Last Updated 2 ಫೆಬ್ರುವರಿ 2019, 3:49 IST
   

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಲಾರಿ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಹಾಸನದ ಶಕಿಲ್ (32) ಮತ್ತು ಮೊಹಮ್ಮದ್ ರಫಿ (30) ಎಂದು ಗುರುತಿಸಲಾಗಿದೆ. ಇಬ್ಬರು ಟ್ಯಾಂಕರ್ ನಲ್ಲಿ ಇದ್ದರು.

ಹಿರಿಯೂರು ಕಡೆಯಿಂದ ಚಳ್ಳಕೆರೆಯತ್ತ ಬರುತ್ತಿದ್ದ ಡಿಸೇಲ್ ತುಂಬಿದ ಟ್ಯಾಂಕರ್, ಸಾಣಿಕೆರೆ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟ್ಯಾಂಕರ್‌ನಿಂದ ಡಿಸೇಲ್ ಸೋರಿಕೆ ಆಗುವುದನ್ನು ತಡೆಯಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.