ಧರ್ಮಪುರ ಸಮೀಪದ ಮ್ಯಾದನಹೊಳೆ-ಸಮುದ್ರದಹಳ್ಳಿ ನಿರ್ಮಾಣ ಹಂತದ ಸಂಪರ್ಕ ಸೇತುವೆ ಪರಿಕರಗಳು ನೀರು ಪಾಲಾಗಿರುವುದು.
ಧರ್ಮಪುರ: ಸಮೀಪದ ಮ್ಯಾದನಹೊಳೆ ಮತ್ತು ಸಮುದ್ರದಹಳ್ಳಿ ಸಂಪರ್ಕ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಶನಿವಾರ ಮತ್ತು ಭಾನುವಾರ ಸುರಿದ ಮಳೆಗೆ ಪರಿಕರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಸುವರ್ಣಮುಖಿ ನದಿಗೆ ಈ ಹಿಂದೆ ಕಟ್ಟಿದ್ದ ಸೇತುವೆ 2022ರಲ್ಲಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದು ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಆಗ ರೈತಸಂಘ ಮತ್ತು ಈ ಭಾಗದ ಗ್ರಾಮಸ್ಥರು ಹಿರಿಯೂರಿಗೆ ಹೋಗಲು ಪ್ರಯಾಸ ಪಡಬೇಕಿತ್ತು. ಜೂನ್‌ನಲ್ಲಿ ಸುಮಾರು ₹ 9.75 ಕೋಟಿ ವೆಚ್ಚದಲ್ಲಿ ಆರಂಭವಾದ ಸೇತುವೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಎರಡು ದಿನ ಸುರಿದ ಮಳೆಗೆ ಸೆಂಟ್ರಿಂಗ್ ಶೀಟ್, ಮರಳು, ಕಬ್ಬಿಣದ ರಾಡು, ಸಂಗ್ರಹಿಸಿಟ್ಟಿದ್ದ ನೂರಾರು ಚೀಲ ಸಿಮೆಂಟ್ ನೀರಿನಲ್ಲಿ ಕೊಚ್ಚಿಹೋಗಿವೆ. ಉಳಿದವು ತೊಯ್ದು ಹಾಳಾಗಿವೆ.
ಹೂವಿನಹೊಳೆ ಮತ್ತು ಇಕ್ಕನೂರು ಪ್ರದೇಶದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಹತ್ತಿ, ಈರುಳ್ಳಿ, ಮೆಕ್ಕೆಜೋಳ ಹಾನಿಯಾಗಿದೆ ಎಂದು ರೈತ ಹೂವಿನಹೊಳೆ ರವೀಂದ್ರಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.