ADVERTISEMENT

ಮಾದಾರ ಚನ್ನಯ್ಯ ಸ್ಮಾಮೀಜಿ ಬಗ್ಗೆ ಮಾತನಾಡಿಲ್ಲ: ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:29 IST
Last Updated 9 ಜೂನ್ 2025, 14:29 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಹೊಳಲ್ಕೆರೆ: ‘ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ವಿಷಯದಲ್ಲಿ ನಾನು ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಬಗ್ಗೆ ಮಾತನಾಡಿಲ್ಲ’ ಎಂದು ಶಾಸಕ ಎಂ.ಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

‘ಆಶ್ರಮದ ಟ್ರಸ್ಟಿ ಹುದ್ದೆಗೆ ನಾನು ರಾಜೀನಾಮೆ ನೀಡಿದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಬೇರೆ ವಿಚಾರಗಳು ನನಗೆ ಬೇಕಿಲ್ಲ. ನಾನು ಮೂರು ಬಾರಿ ಇಲ್ಲಿ ಶಾಸಕನಾಗಿದ್ದು, ಇದುವರೆಗೆ ಆಶ್ರಮದ ವಿಚಾರದಲ್ಲಿ ಮೂಗು ತೂರಿಸಿಲ್ಲ. ಒಬ್ಬ ವಿದ್ಯಾರ್ಥಿಗೆ ಸೀಟ್ ಕೊಡಿ ಎಂದು ಶಿಫಾರಸು ಮಾಡಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸಗಳು ಇರುವಾಗ ಬೇರೆಯವರ ಉಸಾಬರಿ ನನಗೇಕೆ? ಇದು ನನಗೆ ಸಂಬಂಧ ಇಲ್ಲದ ವಿಷಯ’ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

‘ಮಲ್ಲಾಡಿಹಳ್ಳಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ರೈತರ ಅನುಕೂಲಕ್ಕಾಗಿ ಪವರ್ ಸ್ಟೇಷನ್ ನಿರ್ಮಿಸಿದ್ದೇನೆ. ₹ 6 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದೇನೆ. ರಸ್ತೆ, ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದೇನೆ. ರಾಘವೇಂದ್ರ ಸ್ವಾಮೀಜಿ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಸ್ಥಾಪಿಸಿದ ಆಶ್ರಮ ಉಳಿಯಬೇಕು ಎಂಬುದಷ್ಟೇ ನನ್ನ ಅಭಿಲಾಷೆ. ಆಶ್ರಮದಲ್ಲಿ ಇವರು ಇರಬೇಕು, ಇವರು ಇರಬಾರದು ಎಂದು ನಾನೇಕೆ ಹೇಳಿಲಿ?’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.