
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಚಿಕ್ಕಜಾಜೂರು: ಹೊಳಲ್ಕೆರೆ ಹಾಗೂ ರಾಮಗಿರಿ ರೈಲು ನಿಲ್ದಾಣಗಳ ಮಧ್ಯೆ ಸೋಮವಾರ ಬೆಳಿಗ್ಗೆ ಚಲಿಸುತ್ತಿದ್ದ ಯಾವುದೋ ರೈಲಿಗೆ ಸಿಲುಕಿ ಅಂದಾಜು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಮುಂದೆಲೆ ಬೊಕ್ಕತಲೆಯಾಗಿದೆ. ಮೃತನ ಮೈ ಮೇಲೆ ಕಡು ನೀಲಿ ಬಣ್ಣದ ಶರ್ಟ್, ಪಾಚಿಹಸಿರಿನ ಬನಿಯನ್, ನೀಲಿ ಬಣ್ಣದ ಚೆಕ್ಸ್ ಪಂಚೆ ಧರಿಸಿದ್ದಾರೆ.
ಮೃತದೇಹವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಸಂಬಂಧಪಟ್ಟವರು ಯಾರಾದರೂ ಇದ್ದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08192 259643 ಅಥವಾ ಮೊ: 9480802123 ಸಂಪರ್ಕಿಸಬಹುದು ಎಂದು ಚಿಕ್ಕಜಾಜೂರು ರೈಲ್ವೆ ಹೊರ ಉಪ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.