ADVERTISEMENT

ಹೊಸದುರ್ಗ: ಗೊಬ್ಬರ ತುಂಬಿದ್ದ ಲಾರಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:17 IST
Last Updated 19 ಡಿಸೆಂಬರ್ 2025, 7:17 IST
ಹೊಸದುರ್ಗದ ಹೇರೂರಿನ ಸಮೀಪ ಗೊಬ್ಬರದ ಲಾರಿಗೆ ಹೊತ್ತಿರುವ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು
ಹೊಸದುರ್ಗದ ಹೇರೂರಿನ ಸಮೀಪ ಗೊಬ್ಬರದ ಲಾರಿಗೆ ಹೊತ್ತಿರುವ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು   

ಹೊಸದುರ್ಗ: ಹೊಳಲ್ಕೆರೆ ರಸ್ತೆಯ ಹೇರೂರು– ಹಳ್ಳಿಕಟ್ಟೆ ಬಳಿ ಗೊಬ್ಬರದ ಲಾರಿಗೆ ಗುರುವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿಯಿತು.

ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಗುರುವಾರ ರಾತ್ರಿ 9.30 ರ ಸುಮಾರಿಗೆ ಚಿತ್ರದುರ್ಗದಿಂದ ಕುರಿ ಗೊಬ್ಬರವನ್ನು ಧರ್ಮಸ್ಥಳಕ್ಕೆ ಸಾಗಿಸುವ ಲಾರಿಗೆ, ಹೇರೂರು ಸಮೀಪ ( ಅರುಣ್ಯ ಇಲಾಖೆಯ ನರ್ಸರಿ ಬಳಿ) ಲಾರಿಯ ಹಿಂದಿನ ಟೈರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳದಲ್ಲಿದ್ದ ಗಂಗಸಮುದ್ರದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಹೆಚ್. ಬಸವರಾಜ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

'ಲಾರಿಯ ಎರಡು ಟೈರ್ ಗಳು ಸುಟ್ಟಿವೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ, ಚಾಲಂಕ ಹಾಗೂ ಸಹಾಯಕ ಆರಾಮಾಗಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಹೆಚ್. ಬಸವರಾಜ್ ಪ್ರಜಾವಾಣಿಗೆ ತಿಳಿಸಿದರು.'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.