ಹಿರಿಯೂರು: ನಗರದ ಮೇರಿ ಮಾತೆ ದೇವಾಲಯದ ಅದ್ದೂರಿ ಜಾತ್ರಾ ಮಹೋತ್ಸವವನ್ನು ಸೋಮವಾರ ಶಿವಮೊಗ್ಗದ ಕ್ಯಾಥೊಲಿಕ್ ಚರ್ಚ್‌ನ ಧರ್ಮಾಧಿಕಾರಿ ಫ್ರಾನ್ಸಿಸ್ ಸೆರಾವೊ ನಡೆಸಿಕೊಟ್ಟರು.
ಪ್ರಕೃತಿಯ ಮುನಿಸು ಇಳಿಯಲಿ. ಏಸುಪ್ರಭುವು ಜಗತ್ತಿಗೆ ಶಾಂತಿ, ಸಾಮರಸ್ಯದ ಬದುಕು ಕರುಣಿಸಲಿ. ಮಾನವ ಕುಲ ನೆಮ್ಮದಿಯ ಬದುಕು ನಡೆಸುವಂತಾಗಲಿ ಎಂದು ಫ್ರಾನ್ಸಿಸ್ ಸೆರಾವೊ ಪ್ರಾರ್ಥಿಸಿದರು.
ಮೇರಿ ಮಾತೆಯಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಹಿರಿಯೂರಿನ ಧರ್ಮ ಗುರುಗಳಾದ ಫಾದರ್ ರೊನಾಲ್ಡ್ ಡಿಕುನ್ಹ, ಫಾದರ್ ಪಾಲ್ ಕ್ರಾಸ್ಟ ಜನರಿಗೆ ಹಬ್ಬದ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.