
ಚಿತ್ರದುರ್ಗ: ‘ರಾಜ್ಯಪಾಲರಿಗೆ ವಾಪಸ್ ಹೋಗಿ ಎಂದು ನಾವು ಹೇಳಿಲ್ಲ. ಯಾರೋ ಒಬ್ಬರು ಗೋಬ್ಯಾಕ್ ಗವರ್ನರ್ ಎಂದು ಕೂಗಿರಬಹುದು’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಪಾಲರ ನಡೆ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಿಜೆಪಿ ಆರೋಪಗಳಿಗೆ ನಾವು ಸದನದಲ್ಲಿಯೇ ಉತ್ತರ ನೀಡುತ್ತೇವೆ. ಹಿಂದೆಲ್ಲ ರಾಜ್ಯಪಾಲರು ಅನೇಕ ಬಾರಿ ಕೇಂದ್ರ ಸರ್ಕಾರದ ವಿರುದ್ಧದ ಟಿಪ್ಪಣಿಗಳನ್ನು ಓದಿದ್ದಾರೆ. ಅದೇ ರೀತಿ ಈಗಲೂ ರಾಜ್ಯಪಾಲರು ಭಾಷಣ ಓದಬೇಕಾಗಿತ್ತು. ಅದು ಅವರ ಕರ್ತವ್ಯವಾಗಿತ್ತು’ ಎಂದರು.
‘ರಾಜ್ಯಪಾಲರ ನಡೆ ವಿರುದ್ಧ ಕಾನೂನು ಹೋರಾಟವೂ ನಡೆಯಲಿದೆ. ರಾಜ್ಯ ಸರ್ಕಾರ ಬರೆದುಕೊಟ್ಟಿದ್ದೆಲ್ಲವನ್ನೂ ಓದಬೇಕಾಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ನಾವು ಉತ್ತರ ಕೊಡಲು ಸಾಧ್ಯವಿಲ್ಲ. ಅದನ್ನು ಕಾಂಗ್ರೆಸ್ ಹೈಕಮಾಂಡ್ ಹೇಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.