ADVERTISEMENT

ಮೊಳಕಾಲ್ಮುರು: ಬೈಕ್‌ ಪಂಕ್ಚರ್‌ ಮಾಡಿ ₹ 5 ಲಕ್ಷ ಅಪಹರಿಸಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:02 IST
Last Updated 19 ಆಗಸ್ಟ್ 2025, 5:02 IST
   

ಮೊಳಕಾಲ್ಮುರು: ಪಟ್ಟಣದ ಎಸ್‌ಬಿಐ ಬಳಿ ಕಿಡಿಗೇಡಿಗಳು ಬೈಕ್‌ ಪಂಕ್ಚರ್‌ ಮಾಡಿ ಸವಾರರ ಗಮನ ಬೇರೆಡೆ ಸೆಳೆದು ಬೈಕ್‌ನ ಬ್ಯಾಗ್‌ನಲ್ಲಿಟ್ಟಿದ್ದ ₹ 5 ಲಕ್ಷ ಸೋಮವಾರ ಲಪಟಾಯಿಸಿದ್ದಾರೆ.

ತಾಲ್ಲೂಕಿನ ದೇವಸಮುದ್ರ ಹೋಬಳಿಯ ಕೋನಾಪುರ ಗ್ರಾಮದ ಪ್ರೌಢಶಾಲಾ ಶಿಕ್ಷಕ ಸೋಮಶೇಖರ್‌ ಹಣ ಕಳೆದುಕೊಂಡವರು. ತಮ್ಮೇನಹಳ್ಳಿಯ ಎಸ್‌ಬಿಐ ಶಾಖೆಯಿಂದ ₹ 1 ಲಕ್ಷ, ಪಟ್ಟಣದ ಎಸ್‌ಬಿಐ ಶಾಖೆಯಿಂದ ₹ 4 ಲಕ್ಷ ಡ್ರಾ ಮಾಡಿಕೊಂಡು ತಮ್ಮ ಬೈಕ್‌ನ ಬ್ಯಾಗ್‌ನಲ್ಲಿ ಇಟ್ಟಿದ್ದರು. ಬೈಕ್‌ ಪಂಕ್ಚರ್‌ ಆಗಿರುವುದನ್ನು ಗಮನಿಸಿದ ಅವರು ಗ್ಯಾರೇಜ್‌ನತ್ತ ಬೈಕ್‌ ತಳ್ಳಿಕೊಂಡು ಹೊರಟಿದ್ದರು.

ಈ ವೇಳೆ ಹಲವು ಬಾರಿ ಅಡ್ಡ ಬಂದ ಅಪರಿಚಿತರು ಬೈಕ್‌ನ ಸೈಡ್‌ಬ್ಯಾಗ್‌ನಲ್ಲಿದ್ದ ಹಣ ಅಪಹರಿಸಿ ಪರಾರಿಯಾಗಿದ್ದಾರೆ.

ADVERTISEMENT

ಸೋಮಶೇಖರ್‌ ಅವರ ಚಲನವಲನ ಗಮನಿಸಿದ್ದ ಕಿಡಿಗೇಡಿಗಳು ಈ  ಕೃತ್ಯ ಎಸಗಿದ್ದಾರೆ.

ಪಟ್ಟಣ ಠಾಣೆಯಲ್ಲಿ ಸೋಮಶೇಖರ್‌ ದೂರು ದಾಖಲಿಸಿದ್ದಾರೆ.

‘ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿದ್ದು ಕಿಡಿಗೇಡಿಗಳ ಪತ್ತೆಗೆ ಜಾಲ ಬೀಸಲಾಗಿದೆ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಹೊಸಪೇಟೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.