ADVERTISEMENT

ಮೊಳಕಾಲ್ಮುರು: ಕೃಷಿ ಪಂಡಿತ್‌ ಪ್ರಶಸ್ತಿಗೆ ಪರಿಗಣಿಸಲು ತೋಟಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 14:30 IST
Last Updated 4 ಜುಲೈ 2025, 14:30 IST
ಮೊಳಕಾಲ್ಮುರು ತಾಲ್ಲೂಕಿನ ವಿವಿಧ ತೋಟಗಳಿಗೆ ಶುಕ್ರವಾರ ಕೃಷಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.
ಮೊಳಕಾಲ್ಮುರು ತಾಲ್ಲೂಕಿನ ವಿವಿಧ ತೋಟಗಳಿಗೆ ಶುಕ್ರವಾರ ಕೃಷಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.   

ಮೊಳಕಾಲ್ಮುರು: ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ನೀಡುವ ಕೃಷಿ ಪಂಡಿತ್‌ ಪ್ರಶಸ್ತಿಗೆ ಆಯ್ಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳ ತಂಡ ತಾಲ್ಲೂಕಿನ ಆಯ್ದ ರೈತರ ತೋಟಗಳಿಗೆ ಶುಕ್ರವಾರ ಭೇಟಿ ನೀಡಿತ್ತು.

ಪ್ರಶಸ್ತಿಗಾಗಿ ಇಲಾಖೆಯು ರೈತರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿತ್ತು. ಈ ಬಗ್ಗೆ ವಿವರ ಪಡೆಯಲು ತಂಡ ಭೇಟಿ ನೀಡಿತ್ತು. ತಾಲ್ಲೂಕಿನ ದೇವಸಮುದ್ರ, ಯರ್ಜೇನಹಳ್ಳಿ ಮತ್ತು ಸೂರಮ್ಮನಹಳ್ಳಿ ಗ್ರಾಮಗಳ ರೈತರ ತೋಟಗಳಿಗೆ ಭೇಟಿ ನೀಡಿತ್ತು.

‘ವರದಿಯನ್ನು ಇಲಾಖೆಗೆ ಸಲ್ಲಿಸಲಾಗುವುದು. ಇದಕ್ಕಾಗಿ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯು ರೈತರನ್ನು ಆಯ್ಕೆ ಮಾಡಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಕೃಷಿ ವಿಜ್ಞಾನಿ ಎಸ್.‌ ಓಂಕಾರಪ್ಪ, ಜಂಟಿ ನಿರ್ದೇಶಕ ಮಂಜುನಾಥ್‌, ವಿಭಾಗೀಯ ಉಪ ನಿರ್ದೇಶಕ– 2 ಉಮೇಶ್‌ ನಾಯಕ್‌, ಸಹಾಯಕ ನಿರ್ದೇಶಕರಾದ ಎನ್.ವಿ. ಪ್ರಕಾಶ್‌, ಮಿಥುನ್‌, ಸಿಬ್ಬಂದಿ ಹೇಮಂತನಾಯಕ್‌, ಬೊಮ್ಮಲಿಂಗಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.