ADVERTISEMENT

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಚಳವಳಿ ಅಗತ್ಯ: ಪ್ರೊ.ಮಹೇಶ್

ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:13 IST
Last Updated 27 ನವೆಂಬರ್ 2022, 2:13 IST
ಪ್ರೊ.ಸಿ.ಕೆ.ಮಹೇಶ್
ಪ್ರೊ.ಸಿ.ಕೆ.ಮಹೇಶ್   

ಚಿತ್ರದುರ್ಗ: ಸಂಸದೀಯ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಜನಚಳವಳಿಯ ಅಗತ್ಯವಿದೆ ಎಂದು ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಪತ್ರಿಕಾಭವನದಲ್ಲಿ ನವಯಾನ ಬುದ್ಧಿಸಂ, ಸಾಮಾಜಿಕ ಸಂಘರ್ಷ ಸಮಿತಿ, ರಾಜ್ಯ ಕಾನೂನು ವಿದ್ಯಾರ್ಥಿಗಳ, ಪದವೀಧರರ ಸಂಘ ಶನಿವಾರ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸಂಸದೀಯ ಪ್ರಜಾಪ್ರಭುತ್ವದ ಕ್ರಿಯೆಗಳು ನ್ಯಾಯಾಂಗದ ತೀರ್ಪುಗಳಿಗಿಂತಲೂ ಪರಿಣಾಮಕಾರಿಯಾಗಿವೆ. ಸಂಸದೀಯ ಪ್ರಜಾಪ್ರಭುತ್ವವನ್ನು ನಿರ್ದೇಶಿಸುವ ಆಶಯಗಳು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಜನರ ಹೋರಾಟಗಳಿಂದಲೇ ರೂಪುಗೊಳ್ಳಬೇಕು’ ಎಂದರು.

ADVERTISEMENT

ಸಾಮಾಜಿಕ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ರಾಜ್ಯ ಕಾನೂನು ವಿದ್ಯಾರ್ಥಿಗಳ, ಪದವೀಧರರ ಸಂಘದ ಅಧ್ಯಕ್ಷ ಎನ್.ರುದ್ರೇಶ್, ಕಾರ್ಯದರ್ಶಿ ಕೆ.ವಿಶ್ವಾನಂದ, ವೈ.ರಾಜಣ್ಣ ತುರುವನೂರು, ಉಪನ್ಯಾಸಕ ಡಾ. ಸಂಜೀವಕುಮಾರ್ ಪೋತೆ, ಪ್ರೊ.ಜಿ.ವಿ.ನಾಗರಾಜ್, ಡಾ. ವಿ.ಬಸವರಾಜ್ ಮಾತನಾಡಿದರು.

‘ಭಾರತ ಸಂವಿಧಾನ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡಿದ ಮೀಸಲಾತಿ’ ಕುರಿತು ಸಂವಾದ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.