ADVERTISEMENT

ನಾಯಕನಹಟ್ಟಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:02 IST
Last Updated 27 ಫೆಬ್ರುವರಿ 2026, 6:02 IST
ತಳಕು ಹೋಬಳಿಯ ಹಿರೇಹಳ್ಳಿ ಟೋಲ್‌ ಬಳಿ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು
ತಳಕು ಹೋಬಳಿಯ ಹಿರೇಹಳ್ಳಿ ಟೋಲ್‌ ಬಳಿ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು   

ನಾಯಕನಹಟ್ಟಿ: ವೇಗವಾಗಿ ಬಂದ ಕಾರೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಳಕು ಹೋಬಳಿಯ ಹಿರೇಹಳ್ಳಿ ಟೋಲ್‌ಫ್ಲಾಜಾ ಬಳಿ ಗುರುವಾರ ಸಂಜೆ ಅಪಘಾತ ಸಂಭವಿಸಿದೆ. ಮೃತರನ್ನು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ನರಸಿಂಹಮೂರ್ತಿ (40), ಗಂಗಾಧರ (37), ಲೋಹಿತ (38) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸದಾಶಿವಯ್ಯ, ಶಿವಕುಮಾರ್ ಅವರಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಗಂಗಾಧರ, ಲೋಹಿತ, ನರಸಿಂಹಮೂರ್ತಿ, ಸದಾಶಿವಯ್ಯ, ಶಿವಕುಮಾರ್ ಅವರು ಮಂತ್ರಾಲಯಕ್ಕೆ ಹೋಗಿ ಸುಜುಕಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ವಾಪಸ್ ಕುಣಿಗಲ್ ಪಟ್ಟಣಕ್ಕೆ ಬರುವಾಗ ಹಿರೇಹಳ್ಳಿ ಟೋಲ್‌ಫ್ಲಾಜಾ ಬಳಿ ನಿಂತಿದ್ದ  ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.

ADVERTISEMENT

ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.