ನಾಯಕನಹಟ್ಟಿ : ತಳಕು ಬೆಸ್ಕಾಂ ಉಪವಿಭಾಗೀಯ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ, ತಳಕು ಶಾಖಾ ವ್ಯಾಪ್ತಿಯ 66/11ಕೆವಿ ಮೈಲನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಸ್ಕಾಂನಿಂದ 11ಕೆವಿ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಮೈಲನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಓಬಳಾಪುರ, ಭೋಗನಹಳ್ಳಿ, ಸಿ.ಎನ್.ಹಳ್ಳಿ, ಬಸಾಪುರ, ದೊಣ್ಣೆಹಳ್ಳಿ, ತಿಪ್ಪಾರೆಡ್ಡಿಹಳ್ಳಿ, ಗುಡಿಹಳ್ಳಿ, ಕಾಟಂದೇವರಕೋಟೆ, ಘಟಪರ್ತಿ, ಕಾಮಸಮುದ್ರ, ರೇಣುಕಾಪುರ ಗ್ರಾಮಗಳಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೂ ಎಲ್ಲ ವಿಧದ ವಿದ್ಯುತ್ ಪೂರೈಕೆಯಲ್ಲಿ ಶನಿವಾರ ಮತ್ತು ಭಾನುವಾರ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಎನ್.ಜಿ.ಮಮತ ಮತ್ತು ಎಇ.ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.