ADVERTISEMENT

ತಿಪಟೂರಿನಲ್ಲಿ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ: ಕ್ರೀಡಾಪಟುಗಳಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 2:20 IST
Last Updated 11 ಡಿಸೆಂಬರ್ 2021, 2:20 IST
ಹಿರಿಯೂರಿನ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ನಗರಸಭೆ ಸದಸ್ಯ ಗಣೇಶ್ ಕದ್ರು ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.
ಹಿರಿಯೂರಿನ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ನಗರಸಭೆ ಸದಸ್ಯ ಗಣೇಶ್ ಕದ್ರು ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.   

ಹಿರಿಯೂರು: ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಡಿ.11ರಿಂದ 13ರ ವರೆಗೆ ನಡೆಯಲಿರುವ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ಶುಭ ಹಾರೈಸಿ ಬೀಳ್ಕೊಡಲಾಯಿತು.

ಸ್ಥಳೀಯ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ರೀಡಾ ತಂಡದವರಿಗೆಸಮವಸ್ತ್ರ ವಿತರಿಸಿದ ನಗರಸಭೆ ಸದಸ್ಯ ಗಣೇಶ್ ಕದ್ರು, ‘ನಮ್ಮ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೊಮ್ಮೆ ಕ್ರೀಡಾ ನಕ್ಷೆಯಲ್ಲಿ ಹಿರಿಯೂರಿನ ಹೆಸರು ದಾಖಲಾಗುವ ರೀತಿ ಸಾಮರ್ಥ್ಯ ತೋರುವರು’ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ತರಬೇತುದಾರ ಶಿವಪ್ರಸಾದ್, ಮ್ಯಾನೇಜರ್ ಜಗದೀಶ್ ಭಂಡಾರಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಯೋಗಾನಂದ್, ವಿಜಯ್ ಕುಮಾರ್, ರಂಗನಾಥ್, ಪುನೀತ್, ಮಲ್ಲೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.