ADVERTISEMENT

ಹಿರಿಯೂರು: ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:56 IST
Last Updated 4 ನವೆಂಬರ್ 2025, 7:56 IST
ಹಿರಿಯೂರಿನ ಸಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭ ನಡೆಯಿತು
ಹಿರಿಯೂರಿನ ಸಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭ ನಡೆಯಿತು   

ಹಿರಿಯೂರು: ನಗರದ ಸಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭ ನ. 1 ರಿಂದ 3ರ ವರೆಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ನ.1 ರಂದು ಭಗವದ್ ಭಾಗವತಾಚಾರ್ಯ ಪ್ರಾರ್ಥನೆ, ಅನುಜ್ಞೆ, ಸ್ವಸ್ತವಾಚನ, ತೀರ್ಥ ಸಂಗ್ರಹಣೆ (ಗೋಪೂಜೆ),ಯಾಗಶಾಲಾ ಪ್ರವೇಶ, ವಿಶ್ವಕ್ಷೇನೆ, ಆರಾಧನೆ, ಭಗವದ್ ವಾಸುದೇವ ಪುಣ್ಯಾಹ, ಪ್ರತಿಸರ ಬಂಧನ ಋತ್ವಿಕಾವರಣ, ಮೃತ್ಸಂಗ್ರಹಣ, ಅಂಕುರಾರ್ಪಣೆ, ಅನಿರ್ವಾಣ, ಮಹಾಸಂಕಲ್ಪ, ದೀಪಾರಾಧನೆ, ಮಹಾಗಣಪತಿ ಹೋಮ, ಲಘುಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ನ.2 ರಂದು ಬೆಳಿಗ್ಗೆ 5.30ಕ್ಕೆ ಸೋತ್ರ ಪಾರಾಯಣ, ದ್ವಾರತೋರಣ, ಧ್ವಜ ಕುಂಭಾರಾಧನೆ, ಸುಪ್ರಭಾತ, ಮಹಾ ಗಣಪತಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ADVERTISEMENT

ನ.3 ರಂದು ಬೆಳಿಗ್ಗೆ ಸುಪ್ರಭಾತ, ಭಗವತ್ ಪ್ರಾರ್ಥನೆ, ಬಿಂಬ ಪ್ರತಿಷ್ಠಾಂಗ ಅನುಜ್ಞೆ, ಪೀಠಾರ್ಚನೆ, ಬಿಂಬ ಪ್ರತಿಷ್ಠೆ ಸೂತ್ರ ಬಂಧನ, ಪ್ರಧಾನಾದಿ ಪರಿವಾರ ಹೋಮಗಳು, ಪ್ರಾಣ ಪ್ರತಿಷ್ಠೆ, ಷೋಢಸನ್ಯಾಸ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ ನಡೆಸಲಾಯಿತು. ಬೆಳಿಗ್ಗೆ 9 ಗಂಟೆಯಿಂದ ಪಟ್ಟನಾಯಕನಹಳ್ಳಿಯ ಗುರುಗುಂಡೇಶ್ವರ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಚಿತ್ರದುರ್ಗದ ಅಖಿಲ ಭಾರತ ಶ್ರೀಕೃಷ್ಣ ಯಾದವಾನಂದ ಸಂಸ್ಥಾನ ಮಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಬೆಲಗೂರು ಮಾರುತಿ ಪೀಠದ ವಿಜಯ ಮಾರುತಿ ಶರ್ಮ ಗುರುಗಳ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ಜ್ಞಾನ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಮುಖಂಡರಾದ ಮಾಗಡಿ ಜಯರಾಮಯ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕೃಷ್ಣ ಕುಮಾರಿ, ಸಂಗೀತ ವಿದ್ವಾನ್ ತ್ರಿವೇಣಿ ಮತ್ತು ಸಂಗಡಿಗರಿಂದ ಭಜನೆ, ಭಕ್ತಿ ಗೀತೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮೂರೂ ದಿನಗಳು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ಡಿ. ನಾರಾಯಣ ರೆಡ್ಡಿ, ಅಧ್ಯಕ್ಷ ಬಸಂತ್ ಕುಮಾರ್, ಉಪಾಧ್ಯಕ್ಷ ನಿರಂಜನಮೂರ್ತಿ, ಪಿ. ಕೆ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಂ. ದಿವಾಕರ, ಖಜಾಂಚಿ ಪ್ರಹ್ಲಾದ, ಸಹ ಕಾರ್ಯದರ್ಶಿ ನಿರಂಜನ ಶೀಲವಂತರ್, ಸಂಘಟನಾ ಕಾರ್ಯದರ್ಶಿ ಪಿ.ಎಚ್. ನಾಗರಾಜಪ್ಪ, ಸದಸ್ಯರಾದ ಮಹಾಂತೇಶ್, ಸಿಂಗಾರಿ, ಟಿ.ಎಸ್. ಶಿವಪ್ರಸಾದ್ ಎಂ.ಜಿ .ಶ್ರೀಧರ, ಓಂಕೇಶ್, ತುಳಸಿ ಶಿವಣ್ಣ, ವೆಂಕಟೇಶರೆಡ್ಡಿ, ರಾಘವೇಂದ್ರ, ಕಾರ್ತಿಕ್, ಅಂಬಿಕಾ, ಓಂಕಾರೇಶ್ವರ್, ರಮೇಶ್, ಲಲಿತ, ಮಲ್ಲೇಶ್, ರವಿಚಂದ್ರಗೌಡ, ಕೃಷ್ಣ ಕಣ್ಣಯ್ಯ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.