
ಪ್ರಜಾವಾಣಿ ವಾರ್ತೆ
ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಕೈನಡು ಗ್ರಾಮದ ಸಮೀಪ ಮಂಗಳವಾರ ರಾಗಿ ಕಟಾವು ಯಂತ್ರದ ಸ್ಟೇರಿಂಗ್ ತುಂಡಾಗಿ, ಉಲ್ಟಾ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಮಿಳುನಾಡು ಮೂಲದ ಯಂತ್ರ ಚಾಲಕನ ಭೂಪತಿ (25) ಮೃತ ಪಟ್ಟಿದ್ದಾರೆ. ಇವರು ಶ್ರೀರಾಂಪುರದಿಂದ ಹೊಸದುರ್ಗಕ್ಕೆ ಹೋಗುವಾಗ ಕೈನಡು ಗ್ರಾಮದ ಸಮೀಪ ಯಂತ್ರ ಉಲ್ಟಾ ಬಿದ್ದ ಪರಿಣಾಮವಾಗಿ ಸ್ಥಳದಲ್ಲೆೇ ಮೃತಪಟ್ಟಿದ್ದಾರೆ. ಈ ಬಗ್ಗೆ ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.