ADVERTISEMENT

ನೇಕಾರರೊಂದಿಗೆ ರಾಹುಲ್ ಸಂವಾದ ಅ. 16ಕ್ಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:19 IST
Last Updated 27 ಸೆಪ್ಟೆಂಬರ್ 2022, 4:19 IST
ಮೊಳಕಾಲ್ಮುರು ತಾಲ್ಲೂಕಿನ ಊಡೇವಿನಲ್ಲಿ ಸೋಮವಾರ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮದ್ ನಲಪಾಡ್ ನೇತೃತ್ವದ ತಂಡ ಕಂಬಳಿ ನೇಯ್ಗೆಯನ್ನು ವೀಕ್ಷಿಸಿತು.
ಮೊಳಕಾಲ್ಮುರು ತಾಲ್ಲೂಕಿನ ಊಡೇವಿನಲ್ಲಿ ಸೋಮವಾರ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮದ್ ನಲಪಾಡ್ ನೇತೃತ್ವದ ತಂಡ ಕಂಬಳಿ ನೇಯ್ಗೆಯನ್ನು ವೀಕ್ಷಿಸಿತು.   

ಮೊಳಕಾಲ್ಮುರು: ‘ಭಾರತ ಒಗ್ಗೂಡಿಸಿ’ ಯಾತ್ರೆಯು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್‌ 16ಕ್ಕೆ ಬರಲಿದ್ದು, ರಾಹುಲ್ ಗಾಂಧಿ ಅವರು ಇಲ್ಲಿನ ರೇಷ್ಮೆ ಸೀರೆ ಮತ್ತು ಕಂಬಳಿ ನೇಕಾರರ ಜತೆ ಸಂವಾದ ನಡೆಸಲಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮದ್ ನಲಪಾಡ್ ಹೇಳಿದರು.

ತಾಲ್ಲೂಕಿನ ಊಡೇವಿನಲ್ಲಿ ಸೋಮವಾರ ಕಂಬಳಿ ನೇಯ್ಗೆ ಸ್ಥಳಗಳನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರೇಷ್ಮೆಸೀರೆ ಮತ್ತು ಕಂಬಳಿ ನೇಯ್ಗೆಯು ಮೊಳಕಾಲ್ಮುರು ತಾಲ್ಲೂಕಿನ ಪ್ರಮುಖ ಕಸುಬಾಗಿದೆ. ಜಾಗತೀಕರಣ ಹೊಡೆತಕ್ಕೆ ಸಿಲುಕಿ ಈ ಉದ್ಯಮ ಕ್ಷೀಣಿಸುತ್ತಿದೆ. ಈ ಕಾರಣ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದುಹೇಳಿದರು.

ADVERTISEMENT

ಪಟ್ಟಣದ ನೇಕಾರರ ಮನೆಗಳಿಗೆ ತೆರಳಿದ ಅವರು ನೇಯ್ಗೆ ಬಗ್ಗೆ ಮಾಹಿತಿ ಪಡೆದ‌ರು.

ಯಾತ್ರೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕುಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಿತು.

ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷೆ ಭವ್ಯ, ಮುಖಂಡ ಡಾ.ಬಿ. ಯೋಗೇಶ್ ಬಾಬು, ಜಿಲ್ಲಾಧ್ಯಕ್ಷ ಉಲ್ಲಾಸ್, ಬ್ಲಾಕ್ ಅಧ್ಯಕ್ಷ ಕಲೀಂವುಲ್ಲಾ, ಮುಖಂಡರಾದತುಮಕೂರ್ಲಹಳ್ಳಿ ತಿಪ್ಪೇಶ್, ರೇಷ್ಮೆ ವೀರೇಶ್, ಬಾಷಾ, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.