ADVERTISEMENT

ಚಿಕ್ಕಜಾಜೂರು: ಗುಡುಗು, ಸಿಡಿಲು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:44 IST
Last Updated 18 ಏಪ್ರಿಲ್ 2024, 14:44 IST
ಚಿಕ್ಕಜಾಜೂರಿನಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು
ಚಿಕ್ಕಜಾಜೂರಿನಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು    

ಚಿಕ್ಕಜಾಜೂರು: ಗುರುವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆಯಾಗಿದೆ. ಅಲ್ಲದೆ, ಬಿರುಗಾಳಿಗೆ ಮನೆಗಳು ಹಾಗೂ ಅಡಿಕೆ ಶೆಡ್‌ಗಳ ಚಾವಣಿಗೆ ಹಾಕಿದ್ದ ತಗಡಿನ ಶೀಟ್‌ಗಳು ಹಾರಿ ಹೋಗಿವೆ.

ಚಿಕ್ಕಜಾಜೂರಿನಲ್ಲಿ ಮಧ್ಯಾಹ್ನ ಸುಮಾರು 15 ನಿಮಿಷಗಳ ಕಾಲ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆಯಾಗಿದೆ. ಸಮೀಪದ ಚಿಕ್ಕಎಮ್ಮಿಗನೂರು ಹಾಗೂ ಹಿರೇಎಮ್ಮಿಗನೂರು ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆ ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ. 

ಹಿರೇಎಮ್ಮಿಗನೂರು ಗ್ರಾಮದಲ್ಲಿ ಬಿರುಗಾಳಿಗೆ ಹಲವು ರೈತರ ಹತ್ತಾರು ಅಡಿಕೆ ಮರಗಳು ಬಿದ್ದಿವೆ. ಅಲ್ಲದೆ, ವಿದ್ಯುತ್‌ ತಂತಿಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಬೆಸ್ಕಾಂ ಲೈನ್‌ಮನ್‌ಗಳು ತಂತಿಗಳ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸುತ್ತಿದ್ದುದು ಕಂಡು ಬಂದಿತು. ಸಮೀಪದ ಕೊಡಗವಳ್ಳಿ, ಕೊಡಗವಳ್ಳಿ ಹಟ್ಟಿ, ಕೋಟೆಹಾಳ್‌ ಮೊದಲಾದ ಗ್ರಾಮಗಳಲ್ಲಿ ಸುಮಾರು 10 ನಿಮಿಷಗಳ ಕಾಲ ಸೋನೆ ಮಳೆಯಾಗಿದೆ.

ADVERTISEMENT
ಚಿಕ್ಕಎಮ್ಮಿಗನೂರು ಗ್ರಾಮದ ಕೆ.ಪಿ. ಗಂಗಾಧರಪ್ಪ ಎಂಬುವರ ಮನೆಯ ಮೇಲ್ಚಾವಣಿಗೆ ಹಾಕಲಾಗಿದ್ದ ತಗಡಿನ ಶೀಟುಗಳು ಗಾಳಿಗೆ ಹಾರಿ ಹೋಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.